CrimeNational

ಪಾಕಿಸ್ತಾನದಿಂದ ಬಂದ ದೋಣಿಯಲ್ಲಿ 360 ಕೋಟಿ ರೂ. ಬೆಲೆಯ ಹೆರಾಯಿನ್‌..!

ಅಹಮದಾಬಾದ್; ಪಾಕಿಸ್ತಾನದಿಂದ ಭಾರತದ ಗಡಿಗೆ ದೋಣಿಗಳು ಅನಧಿಕೃತವಾಗಿ ಪ್ರವೇಶ ಮಾಡುತ್ತಲೇ ಇವೆ. ಅದ್ರಲ್ಲೂ ಪಾಕ್‌ನಿಂದ ಭಾರತಕ್ಕೆ ನಿರಂತರವಾಗಿ ಡ್ರಗ್ಸ್‌ ರವಾನೆ ಮಾಡುವ ಯತ್ನ ನಡೆಯುತ್ತಿದೆ. ಭದ್ರತಾ ಸಿಬ್ಬಂದಿ ಈ ಬಾರಿ ಕೂಡಾ ಭಾರತಕ್ಕೆ ಡ್ರಗ್ಸ್‌ ಪೂರೈಕೆ ಮಾಡುವ ಪಾಕ್‌ ಯತ್ನಕ್ಕೆ ಅಡ್ಡಗಾಲಾಗಿದ್ದಾರೆ. ಕೋಸ್ಟ್ ಗಾರ್ಡ್ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಜಂಟಿ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ದೋಣಿಯಿಂದ 360 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ದೋಣಿಯಲ್ಲಿ ಹೆರಾಯಿನ್‌ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಅರಿತ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಅದನ್ನು ವಶಪಡಿಸಿಕೊಂಡಿದೆ. ಸಿಜಿ ಮತ್ತು ಎಟಿಎಸ್ ಸಿಬ್ಬಂದಿ ಅರಬ್ಬಿ ಸಮುದ್ರದಲ್ಲಿ 50 ಕೆ.ಜಿ ಹೆರಾಯಿನ್ ಹೊಂದಿದ್ದ ಅಲ್ ಸಕರ್ ಎಂಬ ದೋಣಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬೋಟ್‌ನಲ್ಲಿದ್ದ ಆರು ಮಂದಿಯನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಇನ್ನು ಶುಕ್ರವಾರ, ಮುಂಬೈ, ಗುಜರಾತ್‌ನ ವಿವಿಧೆಡೆ ದಾಳಿ ನಡೆಸಿದ್ದ ರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು 120 ಕೋಟಿ ಮೌಲ್ಯದ ಮೆಫೆಡ್ರೋನ್‌ ಹೆಸರಿನ 60 ಕೆ.ಜಿ. ಡ್ರಗ್ಸ್ ವಶಪಡಿಸಿಕೊಂಡಿದ್ದರು.

Share Post