CrimeNational

ಫ್ಲ್ಯಾಟ್‌ನಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹಗಳು ಪತ್ತೆ!

ಸೂರತ್‌; ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಒಂದರಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಅದು ಕೊಲೆಯಾ, ಆತ್ಮಹತ್ಯೆಯಾ, ಆಕಸ್ಮಿಕ ಸಾವಾ ಎಂಬುದು ಇನ್ನೂ ಗೊತ್ತಾಗಿಲ್ಲ.. ಗುಜರಾತ್‌ನ ಸೂರತ್‌ ನಗರದ ಜಹಾಂಗೀರ್‌ಪುರ ಪ್ರದೇಶದ ಫ್ಲ್ಯಾಟ್​ನಲ್ಲಿ ಈ ದುರ್ಘಟನೆ ನಡೆದಿದೆ..

ಗೀಜರ್‌ ಗ್ಯಾಸ್‌ ಸೋರಿಕೆಯಿಂದ ಉಸಿರುಗಟ್ಟಿ ಸಾವನ್ನಪ್ಪಿರಬಹುದು, ಇಲ್ಲವೆ ಫುಡ್‌ ಪಾಯ್ಸನ್‌ ಆಗಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.. ಮನೆಯಲ್ಲಿ ಒಟ್ಟು ಒಂಬತ್ತು ಮಂದಿ ಇದ್ದರೆ.. ಇದರಲ್ಲಿ ವೃದ್ಧ ಹಾಗೂ ಮೂವರು ಮಹಿಳೆಯರು ಮಾತ್ರ ಸಾವನ್ನಪ್ಪಿದ್ದಾರೆ.. ಉಳಿದ ಐದು ಮಂದಿ ಸುರಕ್ಷಿತವಾಗಿದ್ದಾರೆ.. ಹೀಗಾಘಿ ಹಲವು ಅನುಮಾನಗಳಿಗೆ ಕಾರಣವಾಗಿದೆ..

ಫ್ಲ್ಯಾಟ್​ ಮಾಲೀಕನಾಗಿರುವ ಜಸುಬೆನ್ ವಧೇಲ್, ಆಕೆಯ ಸಹೋದರಿಯರಾದ ಶಾಂತಬೆನ್ ವಧೇಲ್ (53) ಮತ್ತು ಗೌರಿಬೆನ್ ಮೇವಾಡ್ (55) ಮತ್ತು ಗೌರಿಬೆನ್ ಅವರ ಪತಿ ಹೀರಾಭಾಯಿ (60) ಎಂಬುವವರು ಸಾವನ್ನಪ್ಪಿದ್ದಾರೆ.. ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಎಲ್ಲರೂ ಊಟ ಮಾಡಿ ಮಲಗಿದ್ದರು.. ಆದ್ರೆ ಇಂದು ಬೆಳಗ್ಗೆ ಜಶು ಬೆನ್ ಅವರ ಪುತ್ರ ಮುಖೇಶ್ ಅವರು ಚಹಾ ನೀಡಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ..

ಎಲ್ಲಾರೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.. ವಾಂತಿ ಮಾಡಿಕೊಂಡಿದ್ದರು.. ಅವರ ಮೇಲೆ ಯಾವುದೇ ಗಾಯಗಳು ಅಥವಾ ಗುರುತುಗಳು ಕೂಡಾ ಪತ್ತೆಯಾಗಿಲ್ಲ.. ವೈದ್ಯರು ಪರೀಕ್ಷೆ ಮಾಡಿದಾಗ ನಾಲ್ವರೂ ಮೃತಪಟ್ಟಿರುವುದು ಖಾತ್ರಿಯಾಗಿದೆ..

 

Share Post