ಮಹಿಳೆಯ ಕೈಕಾಲು ಕಟ್ಟಿ ಥಳಿಸಿದರು, ತಲೆ ಬೋಳಿಸಿದರು..!
ಉತ್ತರಪ್ರದೇಶ; ಮಹಿಳೆಯೊಬ್ಬರು ತನ್ನ ಸಹೋದರಳಿಯ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ.. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಆಕೆಯ ಮೇಲೇ ದಾಳಿ ಮಾಡಿದ್ದಾರೆ.. ಆಕೆಯನ್ನು ಕಟ್ಟಿಹಾಕಿ ದಾರುಣವಾಗಿ ಥಳಿಸಿದ್ದಲ್ಲದೆ, ತಲೆ ಕ್ಷೌರ ಮಾಡಿಸಿ ಅವಮಾನಿಸಿದ್ದಾರೆ.. ಉತ್ತರ ಪ್ರದೇಶದ ಕನೌಜ್‌ನಲ್ಲಿ ಈ ದಾರುಣ ಘಟನೆ ನಡೆದಿದೆ..
ಮಹಿಳೆಗೆ ತನ್ನ ಸೋದರಳಿಯ ರಾಜನಾಥ್ ಎಂಬಾತ ಲೈಂಗಿಕ ಕಿರುಕುಳ ನೀಡುತ್ತಿದ್ದನಂತೆ.. ಇದರಿಂದ ಮಹಿಳೆ ಮನೆಯವರಿಗೆ ಈ ವಿಚಾರ ತಿಳಿಸಿದ್ದಾಳೆ.. ಆದ್ರೆ ಕುಟುಂಬಸ್ಥರು ಆಕೆಯ ನೆರವಿಗೆ ಬರುವ ಬದಲು ಆಕೆಯ ಮೇಲೇ ದಾಳಿ ಮಾಡಿದ್ದಾರೆ.. ಆಕೆಯ ಕೈಕಾಲು ಕಟ್ಟಿ ಚೆನ್ನಾಗಿ ಥಳಿಸಿದ್ದಾರೆ.. ಜೊತೆಗೆ ಕ್ಷೌರ ಮಾಡಿಸಿ ತಲೆ ಬೋಳಿಸಿದ್ದಾರೆ.. ದೊಣ್ಣೆಗಳಿಂದ ಅಮಾನುಷವಾಗಿ ವರ್ತನೆ ಮಾಡಿದ್ದಾರೆ.. ಈದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ..
ಈ ಸಂಬಂಧ ಪೊಲೀಸರು ವೈರಲ್ ವಿಡಿಯೋವನ್ನು ಪತ್ತೆ ಹಚ್ಚಿ ತನಿಖೆ ಆರಂಭಿಸಿದ್ದಾರೆ. ಮಹಿಳೆಗೆ ಹೊಡೆದ ವ್ಯಕ್ತಿಯನ್ನು ಆಕೆಯ ಪತಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನೊಂದಿಗೆ ಆರು ಮಂದಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಕನೌಜ್ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಆನಂದ್ ತಿಳಿಸಿದ್ದಾರೆ.