CrimeNational

ಕೋಲ್ಕತ್ತಾ ಟ್ರೈನಿ ವೈದ್ಯೆ ರೇಪ್‌ ಅಂಡ್‌ ಮರ್ಡರ್‌; ತಪ್ಪೇ ಮಾಡಿಲ್ಲ ಎಂದ ಆರೋಪಿ!

ಕೋಲ್ಕತ್ತಾ; ಕೋಲ್ಕತ್ತಾದ ಆರ್‌ಜಿ ಕರ್‌ ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ.. ಆರೋಪಿ ಸಂಜಯ್‌ ರಾಯ್‌ನನ್ನು ಸಿಬಿಐ ಪಾಲಿಗ್ರಾಫ್‌ ಪರೀಕ್ಷೆಗೆ ಒಳಪಡಿಸಿತ್ತು.. ಈ ವೇಳೆ ಆತ ತಾನು ಯಾವುದೇ ಅಪರಾಧ ಮಾಡಿಲ್ಲ ಎಂದು ಹೇಳಿದ್ದಾನಂತೆ.. ತನಗೂ ಪ್ರಕರಣಕ್ಕೂ ಸಂಬಂಧವಿಲ್ಲ. ನಾನು ಯಾವುದೇ ಯಾವುದೇ ಅಪರಾಧ ಕೃತ್ಯ ನಡೆಸಿಲ್ಲ ಎಂದು ಆತ ಹೇಳಿದ್ದಾನಂತೆ..
ಪಾಲಿಗ್ರಾಫ್‌ ಪರೀಕ್ಷೆಯಲ್ಲಿ ಸಿಬಿಐ ಆರೋಪಿ ಸಂಜಯ್‌ ರಾಯ್‌ಗೆ ಹತ್ತು ಪ್ರಶ್ನೆಗಳನ್ನು ಕೇಳಿದೆ.. ಈ ವೇಳೆ ಆರೋಪಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.. ಆದ್ರೆ ಆಗಸ್ಟ್‌ 10ರಂದು ಆರೋಪಿಯನ್ನು ಬಂಧಿಸಿದಾಗ ಆತ ತಾನೇ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ.. ಆದ್ರೆ ಪಾಲಿಗ್ರಾಫ್‌ ಪರೀಕ್ಷೆಯಲ್ಲಿ ಆತ ಬೇರೆಯದೇ ಹೇಳುತ್ತಿದ್ದಾನೆ.. ಹೀಗಾಗಿ ಪ್ರಕರಣದ ಬಗ್ಗೆ ಹಲವು ಅನುಮಾನಗಳು ಶುರುವಾಗಿವೆ..
ಇನ್ನು ಪಾಲಿಗ್ರಾಫ್‌ ಪರೀಕ್ಷೆ ವರದಿಗಳು ತನಿಖೆಗೆ ಸಹಕಾರ ನೀಡುತ್ತವೆ ಅಷ್ಟೇ.. ಈ ವರದಿಗಳು ನ್ಯಾಯಾಲಯಕ್ಕೆ ಸಾಕ್ಷಿಯಾಗುವುದಿಲ್ಲ..

Share Post