CrimeNational

ಮುಖೇಶ್‌ ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆ; ಆರೋಪಿ ಅರೆಸ್ಟ್‌

ಮುಂಬೈ; ಉದ್ಯಮಿ ಮುೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದಾರೆ. ಬುಧವಾರ ಮಧ್ಯರಾತ್ರಿ ಸುಮಾರಿಗೆ ಪೊಲೀಸರ ವಿಶೇಷ ತಂಡ ದರ್ಬಾಂಗ್ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಿ, ಮುಂಬೈಗೆ ಕರೆತಂದಿದೆ.

ಬುಧವಾರ, ಮಧ್ಯಾಹ್ನ 12.57 ಮತ್ತು ಸಂಜೆ 5.04ರ ಸುಮಾರಿಗೆ ಎರಡು ಬಾರಿ ಅಂಬಾನಿ ಒಡೆತನದ ಎಚ್‌.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬೆದರಿಕೆ ಕರೆ ಮಾಡಿದ್ದ ಅಪರಿಚಿತನೊಬ್ಬ, ಆಸ್ಪತ್ರೆ ಮತ್ತು ಅಂಬಾನಿ ನಿವಾಸ ಅಂಟಿಲ್ಲವನ್ನು ಸ್ಪೋಟಿಸುತ್ತೇನೆ. ಈ ಮೂಲಕ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ ಮತ್ತು ಮಗ ಆಕಾಶ್ ಅಂಬಾನಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಜೀವ ಬೆದರಿಕೆ ಹಿನ್ನೆಲೆ ಆಸ್ಪತ್ರೆ ಮತ್ತು ಅಂಬಾನಿ ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು.

Share Post