Crime

ಥಾಣೆಯಲ್ಲಿ ಅಗ್ನಿ ದುರಂತ; ಹೊತ್ತಿ ಉರಿದ ಪ್ಲಾಸ್ಟಿಕ್‌ ಗೋಡೌನ್‌

ಥಾಣೆ: ಥಾಣೆಯಲ್ಲಿ ಇಂದು ಮುಂಜಾನೆ ಭಾರಿ ಬೆಂಕಿ ದುರಂತ ಸಂಭವಿಸಿದೆ. ಇಲ್ಲಿನ ಶಿಲ್ಪಾತಾ ಪ್ರದೇಶದಲ್ಲಿರುವ ಖಾನ್‌ ಕಾಂಪೌಂಡ್‌ನಲ್ಲಿ ಪ್ಲಾಸ್ಟಿಕ್‌ ಗೋಡೌನ್‌ಗೆ ಆಕಸ್ಮಿಕ ಬೆಂಕಿ ಬಿದ್ದಿದೆ.

ಮುಂಜಾನೆಯೇ ಪ್ಲಾಸ್ಟಿಕ್‌ ಗೋಡೌನ್‌ಗೆ ಬೆಂಕಿ ಬಿದ್ದಿದ್ದರಿಂದ ಸುತ್ತಲೂ ದಟ್ಟ ಹೊಗೆ ಆವರಿಸಿತ್ತು. ಪ್ಲಾಸ್ಟಿಕ್‌ಗೆ ಬಹುಬೇಗ ಬೆಂಕಿ ಹೊತ್ತಿಕೊಳ್ಳುವುದರಿಂದ ಸ್ವಲ್ಪ ಸಮಯದಲ್ಲೇ ಇಡೀ ಗೋಡೌನ್‌ಗೆ ಬೆಂಕಿ ಆವರಿಸಿತ್ತು. ಗೋಡೌನ್‌ ಧಗಧಗನೆ ಉರಿಯುತ್ತಿರುವುದನ್ನು ನೋಡಿದ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ.

ಅಗ್ನಿ ಶಾಮಕದ ಆರು ವಾಹನಗಳು ಆಗಮಿಸಿ, ಗಂಟೆಗೂ ಹೆಚ್ಚುಕಾಲ ಕಾರ್ಯಾಚರಣೆ ನಡೆಸಿದವು. ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ದುರ್ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

Share Post