ಪಕ್ಕದ ಮನೆಯವರ ಕಾರಿನ ಗಾಜು ಒಡೆದ ಶಾಲಾ ಶಿಕ್ಷಕಿ!; ಕಾರಣ ಏನು ಗೊತ್ತಾ..?
ಲಕ್ನೋ; ಪಕ್ಕದ ಮನೆಯ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಕಾರಿನ ಗಾಜನನ್ನು ಶಾಲಾ ಶಿಕ್ಷಕಿಯೊಬ್ಬರು ಒಡೆದಿದ್ದು, ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.. ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದಿದೆ..
ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿರುವ ಪಾರುಲ್ ಶರ್ಮಾ ಅವರು ಪಕ್ಕದ ಮನೆಯ ಪ್ರಿಯಾ ಗೋಯೆಲ್ ಅವರ ಮನೆಯ ಬಳಿ ಪಾರ್ಕ್ ಮಾಡಲಾಗಿದ್ದ ಕಾರಿನ ಗ್ಲಾಸ್ ಒಡೆದಿದ್ದಾರೆ.. ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಇಟ್ಟಿಗೆಯಿಂದ ಕಾರಿನ ಗಾಜು ಪುಡಿ ಪುಡಿ ಮಾಡಲಾಗಿದೆ.. ಈ ಘಟನೆಯನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ..
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.. ಎರಡೂ ಕುಟುಂಬಗಳ ನಡುವೆ ವೈಯಕ್ತಿಕ ದ್ವೇಷವಿತ್ತು.. ಆಗಾಗ ಜಗಳ ನಡೆಯುತ್ತಿತ್ತು.. ಈ ಕಾರಣದಿಂದಾಗಿಯೇ ಶಿಕ್ಷಕಿ ಈ ಕೃತ್ಯ ಎಸಗಿದ್ದಾಳೆ ಎಂದು ಆರೋಪಿಸಲಾಗಿದೆ..