ತನಗಿಂತ ಪತ್ನಿ ಮೊದಲು ಸಾಯಬೇಕು ಅಂತ ಕೊಚ್ಚಿ ಕೊಲೆ ಮಾಡಿದ ರೋಗಿ!
ಬಳ್ಳಾರಿ; ಆತ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ. ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ. ಆದ್ರೆ ಹೆಂಡತಿ ಆತನನ್ನು ಸರಿಯಾಗಿ ಆರೈಕೆ ಮಾಡುತ್ತಿರಲಿಲ್ಲ. ಇದರಿಂದಾಗಿ ಆತ ತನಗಿಂತ ಮೊದಲೇ ಹಂಡತಿ ಸಾಯಬೇಕು ಎಂದು ನಿರ್ಧರಿಸಿ ಆಕೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಬಳ್ಳಾರಿ ಜಿಲ್ಲೆ ಸಿರಗುಪ್ಪ ಬಳಿಯ ಬಾಲಕುಂದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂವತ್ತೈದು ವರ್ಷದ ಮೈಬುನಾ ಬಿ ಎಂಬಾಕೆಯೇ ಕೊಲೆಯಾದ ಮಹಿಳೆ. ಆಕೆ ಪತಿ ರಸೂಲ್ ಸಾಬ್ ಎಂಬಾತನೇ ಕೊಲೆಗಾರ. ರಸೂಲ್ ಸಾಬ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ. ಆದ್ರೆ ಈ ವೇಳೆ ಪತ್ನಿ ಆತನಿಗೆ ಸರಿಯಾಗಿ ಆರೈಕೆ ಮಾಡುತ್ತಿಲ್ಲವಂತೆ. ಹೀಗಾಗಿ ನಾನು ಸಾಯುವುದಕ್ಕಿಂತ ಮೊದಲೇ ಹೆಂಡತಿ ಸಾಯಬೇಕು ಎಂದು ಆತ ನಿರ್ಧರಿಸಿದ್ದಾನೆ.
ಹೀಗಾಗಿ ಮಲಗಿದ್ದ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.