CrimeNational

ಮೆದಕ್‌ ಬಳಿ ಲಘು ವಿಮಾನ ಪತನ; ಒಬ್ಬರು ದುರ್ಮರಣ

ಹೈದರಾಬಾದ್‌; ತೆಲಂಗಾಣದಲ್ಲಿ ಲಘು ವಿಮಾನ ಪತನಗೊಂಡಿದ್ದು, ಭಾರಿ ಬೆಂಕಿಯೊಂದಿಗೆ ಹೊತ್ತಿ ಉರಿದಿದೆ. ತೆಲಂಗಾಣದ ಮೆದಕ್‌ನ ತೂಪ್ರಾನ್‌ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ತರಬೇತಿ ವಿಮಾನದಲ್ಲಿ ಇಬ್ಬರು ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಲಘು ವಿಮಾನ ಪತನಗೊಂಡಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಘಟನೆಯಲ್ಲಿ ವಿಮಾನದಲ್ಲಿದ್ದ ಒಬ್ಬ ಪೈಲಟ್‌ ಸಾವನ್ನಪ್ಪಿದ್ದಾರೆ. ಮತ್ತೊಬ್ಬರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ.

ಈ ಲಘು ವಿಮಾನ ದುಂಡಿಗಲ್‌ ವಿಮಾನ ನಿಲ್ದಾಣಕ್ಕೆ ಸೇರಿದ ತರಬೇತಿ ವಿಮಾನ ಎಂದು ತಿಳಿದುಬಂದಿದೆ.

Share Post