CrimeDistricts

ಹೊಳೆಯಲ್ಲಿ ತಾಯಿ, ಹೆಣ್ಣು ಮಕ್ಕಳಿಬ್ಬರ ಶವಗಳು ಪತ್ತೆ!

ಮಡಿಕೇರಿ; ಪೊನ್ನಂಪೇಟೆ ಬಳಿ ಕೂಟಿಯಾಲ ಹೊಳೆಯಲ್ಲಿ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಹೈಸೊಡ್ಲೂರು ಬಳಿ ಮೃತದೇಗಳು ಪತ್ತೆಯಾಗಿದ್ದು, ಹುದಿಕೇರಿ ಗ್ರಾಮದ ಅಶ್ವಿನಿ (48), ನಿಕಿತಾ (21) ಹಾಗೂ ನವ್ಯ (18) ಮೃತರು ಎಂದು ತಿಳಿದುಬಂದಿದೆ.

ಅಶ್ವಿನಿಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಯಾಗಿದ್ದು, ಅವರು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹುದಿಕೇರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು, ಅಶ್ವನಿ ಗಂಡ ಮಂಡ್ಯ ಮೂಲದವರಾಗಿದ್ದು, ಮೈಸೂರಿನ ಹೋಟೆಲ್‌ ಒಂದರಲ್ಲಿ ಕೆಲಸ ಮಾಡುತ್ತಾರೆ.

ಇವರಿಗೆ ಹೈಸೊಡ್ಲೂರು ಬಳಿಯ ಐಗುಂದದಲ್ಲಿ ಒಂದು ಎಕರೆ ಕಾಫಿ ತೋಟವಿದೆ. ಶನಿವಾರ ಮಧ್ಯಾಹ್ನ ಮೂವರೂ ಸ್ಕೂಟರ್‌ನಲ್ಲಿ ಕಾಫಿ ತೋಟದ ಕಡೆ ತೆರಳುತ್ತಿರುವುದನ್ನು ಕೆಲವರು ನೋಡಿದ್ದಾರೆ. ಆದ್ರೆ ಅಲದ್ಲೇನಾಯ್ತೋ ಏನೋ ಮೂವರೂ ಹೊಳೆಯಲ್ಲಿ ಸಾವನ್ನಪ್ಪಿದ್ದಾರೆ. ಇದು ಆತ್ಮಹತ್ಯೆಯೋ, ಕೊಲೆಯೋ ಅಥವಾ ಆಕಸ್ಮಿಕ ಸಾವೋ ಎಂಬುದು ಗೊತ್ತಾಗುತ್ತಿಲ್ಲ.

ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share Post