ಮಲಗೋಣ ಬಾ ಎಂದು ಕರೆದರಂತೆ ಪೊಲೀಸ್ ಇನ್ಸ್ಪೆಕ್ಟರ್
ಕೋಲಾರ; ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದರೆ ಸಿಪಿಐ ಲೈಂಗಿಕವಾಗಿ ಸಹಕರಿಸು ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.. ಪಕ್ಕದ ಮನೆಯವರ ದೌರ್ಜನ್ಯದ ವಿರುದ್ಧ ಮಹಿಳೆಯೊಬ್ಬರು ಕೋಲಾರ ಜಿಲ್ಲೆ ಬಂಗಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರಂತೆ.. ಈ ವೇಳೆ ಸಿಪಿಐ ನಂಜಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ..
ಸಿಪಿಐ ನಂಜಪ್ಪ ಅವರು ನನ್ನನ್ನು ಠಾಣೆಗೆ ಕರೆಸಿ ಮಲಗೋಕೆ ಬಾ ಎಂದು ಕರೆಯುತ್ತಾರೆ.. ಬರದಿದ್ದರೆ ಸುಳ್ಳು ಕೇಸ್ ಹಾಕಿಸಿ ಕೊಳಗೆ ಹಾಕಿಸುವುದಾಗಿ ಬೆದರಿಸುತ್ತಿದ್ದಾರೆ ಎಂದು ಸಂತ್ರಸ್ತೆ ಮಂಜುಳಾ ಆರೋಪ ಮಾಡಿದ್ದಾಳೆ.. ಮಹಿಳಾ ಪೊಲೀಸರಿಲ್ಲದ ನನ್ನನ್ನು ಬಂಧಿಸಿ ಅವಮಾನ ಮಾಡಿದ್ದಾರೆ.. ಆಗ ಪುರುಷ ಪೊಲೀಸರನ್ನು ಮನೆ ಬಳಿ ಕಳುಹಿಸಿ ಕಿರುಕುಳ ನೀಡಲಾಗುತ್ತಿದೆ.. ನನ್ನ ಮೇಲೆ ವೇಶ್ಯಾವಾಟಿಕೆ ಕೇಸ್ ಹಾಗೂ ನನ್ನ ಗಂಡನ ವಿರುದ್ಧ ರೌಡಿ ಶೀಟ್ ತೆರೆಯೋದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದೂ ಮಹಿಳೆ ಆರೋಪ ಮಾಡಿದ್ದಾರೆ.. ನನಗೆ ರಕ್ಷಣೆ ಕೊಡಿ ಮಹಿಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ..
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ಒಂದರಲ್ಲಿ ಸಂತ್ರಸ್ತೆ ಮಂಜುಳ ಹಾಗೂ ಪತಿ ಕಟ್ಟಾ ಸೀನು ಆರೋಪಿಗಳಾಗಿದ್ದಾರೆ. ವಿಚಾರಣೆಗೆಂದು ಕರೆದ ವೇಳೆ ಹೀಗೆ ಅವಮಾನವಾಗಿದೆ ಎಂದು ಆರೋಪಿಸಲಾಗಿದೆ.