Politics

ಸದನದಲ್ಲಿ ವಾಗ್ಯುದ್ಧ ಜೋರು; ಅಶ್ವತ್ಥನಾರಾಯಣ-ಡಿ.ಕೆ.ಶಿವಕುಮಾರ್‌ ಜಟಾಪಟಿ!

ಬೆಂಗಳೂರು; ನಿನ್ನೆಯಿಂದ ಆರಂಭವಾಗಿರುವ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಗದ್ದಲ, ಕೋಲಾಹಲವೇ ಉಂಟಾಗುತ್ತಿದೆ.. ಕಲಾಪದಲ್ಲಿ ಬರೀ ಆರೋಪ, ಪ್ರತ್ಯಾರೋಪಗಳಲ್ಲೇ ಕಾಲಹರಣವಾಗುತ್ತಿದೆ.. ರಾಜ್ಯ ಸರ್ಕಾರದ ಹಗರಣಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಸರ್ಕಾರದ ವಿರುದ್ಧ ಮುಗಿ ಬೀಳುತ್ತಿವೆ.. ಏಕವಚನದಲ್ಲೇ ಬೈದಾಡಿಕೊಂಡ ಸನ್ನಿವೇಶಗಳು ಕೂಡಾ ಎದುರಾಗಿವೆ..

ಇದನ್ನೂ ಓದಿ; ಕಾರವಾರದ ಬಳಿ ಭಾರಿ ದುರಂತ; ಗುಡ್ಡ ಕುಸಿದು 9 ಮಂದಿ ನಾಪತ್ತೆ!

ಇಂದು ಕಲಾಪ ಶುರುವಾಗುತ್ತಿದ್ದಂತೆ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ವಾಲ್ಮೀಕಿ ನಿಗಮದಲ್ಲಿ ನಡೆದಿರುವ 181 ಕೋಟಿ ರೂಪಾಯಿ ಹಗರಣದ ಬಗ್ಗೆ ಚರ್ಚೆ ಶುರು ಮಾಡಿದರು.. ಈ ವೇಳೆ ಸಿಎಂ ಸಿದ್ದರಾಮಯ್ಯ ಕಲಾಪಕ್ಕೆ ಗೈರಾಗಿದ್ದರು.. ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಆಕ್ಷೇಪ ವ್ಯಕ್ತಪಡಿಸಿದರು.. ಸಿಎಂ ಗೈರಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು ಕೂಡಲೇ ಸಿದ್ದರಾಮಯ್ಯ ಅವರನ್ನು ಸದನಕ್ಕೆ ಕರೆಸಬೇಕೆಂದು ಪಟ್ಟು ಹಿಡಿದರು.. ಈ ವೇಳೆ ಡಿ.ಕೆ.ಶಿವಕುಮಾರ್‌ ಹಾಗೂ ಅಶ್ವತ್ಥನಾರಾಯಣ ನಡುವೆ ವಾಗ್ಯುದ್ಧ ನಡೆಯಿತು..

ಇದನ್ನೂ ಓದಿ; 7ನೇ ತರಗತಿ ಬಾಲಕಿ ಗ್ಯಾಸ್‌ ಡೆಲಿವರಿ ಬಾಯ್‌ ಮನೆಯಲ್ಲಿ ಅನುಮಾನಾಸ್ಪದ ಸಾವು!

Share Post