ತಂದೆ, ತಾಯಿ, ಹೆಂಡತಿ, ಮಗು ಸೇರಿ ಕುಟುಂಬದ 8 ಮಂದಿಯ ಬರ್ಬರ ಹತ್ಯೆ!
ಛಿಂದ್ವಾರಾ; ಮಧ್ಯಪ್ರದೇಶದಲ್ಲಿ ರಾಕ್ಷಸನೊಬ್ಬ ತನ್ನ ಇಡೀ ಕುಟುಂಬವನ್ನು ಮಚ್ಚಿನಿಂದ ಕೊಚ್ಚಿ ಕೊಂದಿದ್ದಾನೆ.. ತಂದೆ-ತಾಯಿ, ಸಹೋದರ, ಪತ್ನಿ, ಮಗು ಸೇರಿ ಒಟ್ಟು ಏಳು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.. ಅನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ಇದರಿಂದಾಗಿ ಇಡೀ ಕುಟುಂಬ ಮಸಣ ಸೇರಿದಂತಾಗಿದೆ..
ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಇಂತಹ ಭೀಕರ ಕೃತ್ಯ ನಡೆದಿದೆ.. ಮಹುಲ್ಜಿರ್ ಪೊಲೀಸ್ ಠಾಣೆ ವ್ಯಾಪ್ತಿಯ ಬೋದಲಕ್ಚಾರ್ ಗ್ರಾಮದಲ್ಲಿ ಸಾಮೂಹಿಕ ಮರ್ಡರ್ ನಡೆದಿದ್ದು, ಇಡೀ ಗ್ರಾಮ ಬೆಚ್ಚಿಬಿದ್ದಿದೆ.. ಕಳೆದ ರಾತ್ರಿ ಈ ಕೃತ್ಯ ನಡೆದಿದೆ.. ಇದರಿಂದಾಗಿ ಇಡೀ ಗ್ರಾಮವನ್ನೇ ಸೀಲ್ ಮಾಡಲಾಗಿದೆ..
ಯಾಕೆ ಈ ಘಟನೆ ನಡೆಯಿತು ಅನ್ನೋದು ಗೊತ್ತಾಗಿಲ್ಲ.. ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿರಬಹುದು ಎಂದು ಹೇಳಲಾಗುತ್ತಿದೆ.. ಕುಡಿದುಬಂದಿದ್ದ ಮಗ ಪೋಷಕರ ಜೊತೆ ಗಲಾಟೆ ಮಾಡಿಕೊಂಡಿದ್ದು, ಇದೇ ವೇಲೆ ಮಚ್ಚಿನಿಂದ ಎಲ್ಲರನ್ನೂ ಹತ್ಯೆ ಮಾಡಿದ್ದಾನೆ.. ಇದರಿಂದಾಗಿ ಇಡೀ ಮನೆಯಲ್ಲಿ ರಕ್ತ ಕೋಡಿಯಂತೆ ಹರಿದಿದೆ.. ನಂತರ ಆತ ಕೂಡಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..