ಬೆಟ್ಟದ ತುದಿಯಲ್ಲಿ ಕಾರ್ ರಿವರ್ಸ್ ಮಾಡುತ್ತಾ ರೀಲ್ಸ್!; ಆ ಹುಡುಗಿ ಏನಾದಳು ಗೊತ್ತಾ..?
ಸಂಭಾಜಿನಗರ; ಬೆಟ್ಟದ ತುದಿಯಲ್ಲಿ ಕಾರು ರಿವರ್ಸ್ ತೆಗೆಯುತ್ತಾ ರೀಲ್ಸ್ ಮಾಡುತ್ತಿದ್ದ ಯುವತಿಯೊಬ್ಬಳು ನೇರ ಪರಲೋಕ ಸೇರಿದ್ದಾಳೆ.. ಬೆಟ್ಟದ ಮೇಲೆ ರೀಲ್ಸ್ ಮಾಡುತ್ತಾ ಕಾರು ರಿವರ್ಸ್ ತೆಗೆಯುತ್ತಿದ್ದಾಗ ಕಾರು ಪ್ರಪಾತಕ್ಕೆ ಉರುಳಿಬಿದ್ದಿದೆ.. 300 ಅಡಿ ಆಳದ ಕಂದಕಕ್ಕೆ ಕಾರು ಉರುಳಿದ್ದರಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.. ಆಕೆ ರಿವರ್ಸ್ ತೆಗೆಯುವುದನ್ನು ಯುವಕನೊಬ್ಬ ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ..
ಮಹಾರಾಷ್ಟ್ರದ ಸಂಭಾಜಿನಗರ ಜಿಲ್ಲೆಯ ಸುಲಿಭಂಜನ್ ಗ್ರಾಮದ ಬೆಟ್ಟದಲ್ಲಿ ಈ ದುರ್ಘಟನೆ ನಡೆದಿದೆ.. ಬೆಟ್ಟದ ಮೇಲೆ ದತ್ತ ಮಂದಿರ ಇದ್ದು, ಮೂವರು ಸ್ನೇಹಿತರು ದೇಗುಲಕ್ಕೆ ಭೇಟಿ ನೀಡಿದ್ದರು.. ಈ ವೇಳೆ ಬೆಟ್ಟದ ತುದಿಯಲ್ಲಿ ರೀಲ್ಸ್ ಮಾಡುತ್ತಿದ್ದರು.. ಕಾರ್‌ನಲ್ಲಿ ಕುಳಿದ ಶ್ವೇತಾ ದೀಪಕ್ ಸುರ್ವಾಸೆ ಕಾರ್‌ಅನ್ನು ರಿವರ್ಸ್ ತೆಗೆಯುತ್ತೇನೆ.. ಅದನ್ನು ರೀಲ್ಸ್ ಮಾಡಿ ಎಂದು ಫ್ರೆಂಡ್ಸ್‌ಗೆ ಹೇಳಿದ್ದಾಳೆ.. ರೀಲ್ಸ್ ಹುಚ್ಚಲ್ಲಿ ಮುಳುಗಿದ್ದ ಆಕೆ ನೋಡದೆ ಜಾಸ್ತಿ ರಿವರ್ಸ್ ಹೊಡೆದಿದ್ದು, ಕಾರು ಪ್ರಪಾತಕ್ಕೆ ಬಿದ್ದಿದೆ ಎಂದು ತಿಳಿದುಬಂದಿದೆ..
ಶ್ವೇತಾ ಸ್ನೇಹಿತ ಸೂರಜ್ ಸಂಜೌ ಕಾರು ರಿವರ್ಸ್ ತೆಗೆಯೋ ವಿಡಿಯೋವನ್ನು ರೆಕಾರ್ಡ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ.. ಈಗ ಲೈಲ್ ಆಕ್ಸಿಡೆಂಟ್ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ..