BengaluruCrime

ಪಂಚೆ ಧರಿಸಿ ಬಂದ ರೈತನಿಗೆ ನೋ ಎಂಟ್ರಿ!; ಜಿಟಿ ಮಾಲ್‌ ಸಿಬ್ಬಂದಿ ದರ್ಪ!

ಬೆಂಗಳೂರು; ಇತ್ತೀಚೆಗೆ ಕೊಳೆಯಾದ ಬಟ್ಟೆ ಧರಿಸಿ ಬಂದಿದ್ದ ರೈತನೊಬ್ಬನನ್ನು ಮೆಟ್ರೋ ಸ್ಟೇಷನ್‌ ಒಳಗೆ ಬಿಡದೇ ಅವಮಾನ ಮಾಡಲಾಗಿತ್ತು.. ಈಗ ಮಾಲ್‌ ಸರದಿ.. ಬೆಂಗಳೂರಿನಲ್ಲಿ ಕೆಲಸ ಮಾಡುವ ಮಗನೊಬ್ಬ ಹಳ್ಳಿಯಿಂದ ಬಂದಿದ್ದ ತನ್ನ ತಂದೆಗೆ ಸಿನಿಮಾ ತೋರಿಸಲು ಮಾಲ್‌ಗೆ ಹೋಗಿದ್ದಾರೆ.. ಆದ್ರೆ ಮಾಲ್‌ನ ಸೆಕ್ಯೂರಿಟಿ ಸಿಬ್ಬಂದಿ ಪಂಚೆ ಧರಿಸಿ ಬಂದವರಿಗೆ ಎಂಟ್ರಿ ಇಲ್ಲ ಎಂದು ಹೇಳಿದ್ದಾರೆ.. ಬೆಂಗಳೂರಿನ ಮಾಗಡಿ ರಸ್ತೆ ಟೋಲ್‌ ಗೇಟ್‌ನಲ್ಲಿರುವ ಜಿಟಿ ವರ್ಲ್ಡ್‌ ಮಾಲ್‌ನಲ್ಲಿ ಈ ಘಟನೆ ನಡೆದಿದೆ..

ಇದನ್ನೂ ಓದಿ; ಟೊಮ್ಯಾಟೋ ತೋಟಕ್ಕೆ ಸನ್ನಿ ಲಿಯೋನ್‌, ರಚಿತಾ ರಾಮ್‌ ಕಾವಲು!

ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಗ್ರಾಮದ ನಾಗರಾಜ್ ಎಂಬಾತ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾರೆ.. ಅವರ ತಂದೆ ಮಗನನ್ನು ನೋಡಲು ಬೆಂಗಳೂರಿಗೆ ಬಂದಿದ್ದರು.. ಅವರಿಗೆ ಪ್ಯಾಂಟ್‌ ಹಾಕಿ ಅಭ್ಯಾಸ ಇಲ್ಲ.. ಕಚ್ಚೆ ಪಂಚೆ ಧರಿಸುತ್ತಾರೆ.. ತಂದೆಗೆ ಸಿನಿಮಾ ನೋಡುವ ಆಸೆಯಾಗಿದ್ದರಿಂದ ಹತ್ತಿರದಲ್ಲೇ ಇದ್ದ ಜಿಟಿ ಮಾಲ್‌ಗೆ ನಾಗರಾಜ್‌ ಅವರನ್ನು ಕರೆದುಕೊಂಡು ಹೋಗಿದ್ದಾರೆ.. ಆದ್ರೆ ಸೆಕ್ಯೂರಿಟಿ ನಾಗರಾಜ್‌ ಎಂಬಾತ ಪಂಚೆ ಹಾಕಿಕೊಂಡು ಬಂದವರಿಗೆ ಪ್ರವೇಶವಿಲ್ಲ ಎಂದು ಹೇಳಿದ್ದಾರೆ.. ಮಾಲ್‌ ಮ್ಯಾನೇಜರ್‌ ಕೂಡಾ ಇದನ್ನೇ ಹೇಳಿ ಸತಾಯಿಸಿದ್ದಾರೆ.. ಕೊನೆಗೆ ಎಲ್ಲಾ ಕಡೆಯಿಂದ ಆಕ್ರೋಶ ವ್ಯಕ್ತವಾದ ಮೇಲೆ ಒಳಬಿಟ್ಟಿದ್ದಾರೆ..

ಇದನ್ನೂ ಓದಿ; ಬಿಎಂಟಿಸಿ ಕಚೇರಿಯಲ್ಲೇ ನೌಕರ ನೇಣಿಗೆ ಶರಣು..!

Share Post