BengaluruCrime

ಬುಕಿಂಗ್‌ ಕ್ಯಾನ್ಸಲ್‌ ಮಾಡಿದ್ದಕ್ಕೆ ಯುವತಿ ಕೆನ್ನೆಗೆ ಬಾರಿಸಿದ ಆಟೋ ಡ್ರೈವರ್‌!

ಬೆಂಗಳೂರು; ಬುಕಿಂಗ್‌ ಕ್ಯಾನ್ಸಲ್‌ ಮಾಡಿದರು ಅನ್ನೋ ಕಾರಣಕ್ಕೆ ಸಿಟ್ಟಿಗೆದ್ದ ಆಟೋ ಡ್ರೈವರ್‌ ಒಬ್ಬ ಯುವತಿ ಕೆನ್ನಗೆ ಬಾರಿಸಿ ರಾದ್ಧಾಂತ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.. ಇದರ ವಿಡಿಯೋ ಈಗ ಸೋಷಿಯ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಜನರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.. ಆಟೊ ಡ್ರೈವರ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ..
ವಿಡಿಯೋದಲ್ಲಿ ಕೆನ್ನೆಗೆ ಹೊಡೆದಿರುವ ದೃಶ್ಯ ಇಲ್ಲ.. ಆದ್ರೆ ಆಟೋದಲ್ಲಿರುವ ಯುವತಿ ನನ್ನ ಕೆನ್ನೆಗೆ ಯಾಕೆ ಹೊಡೆದು ಎಂದು ಪ್ರಶ್ನೆ ಮಾಡುತ್ತಾರೆ.. ಆಗ ಆಟೋ ಡ್ರೈವರ್‌ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಪೀಕ್‌ ಅವರ್‌ನಲ್ಲಿ ಆಟೋಗಳನ್ನು ಬುಕ್‌ ಆಗುತ್ತಿರಲಿಲ್ಲವಂತೆ.. ಹೀಗಾಗಿ ಯುವತಿ ಹಾಗೂ ಯುವತಿಯ ಸ್ನೇಹಿತ ಬೇರೆ ಬೇರೆ ಆಟೋ ಬುಕ್‌ ಮಾಡಿದ್ದಾರೆ.. ಯಾವುದೋ ಮೊದಲ ಬಂತೂ ಆ ಆಟೋವನ್ನು ಯುವತಿ ಹತ್ತಿದ್ದಾಳೆ.. ಎರಡನೇ ಆಟೋ ಬುಕಿಂಗ್‌ ಕ್ಯಾನ್ಸಲ್‌ ಮಾಡಿದ್ದಾರೆ.. ಆದ್ರೆ ಎರಡನೇ ಆಟೋದವನು ಕೂಡಾ ಅಲ್ಲಿಗೆ ಬಂದಿದ್ದಾನೆ.. ಈ ವೇಳೆ ಜಗಳವಾಗಿದ್ದು, ಆಟೋ ಡ್ರೈವರ್‌ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ..
ರೈಡ್‌ ಕ್ಯಾನ್ಸಲ್‌ ಮಾಡಿದ್ದಕ್ಕೆ ಆಟೋ ಡ್ರೈವರ್‌ ನನಗೆ ನಿನ್ನೆ ಕಿರುಕುಳ ನೀಡಿದ್ದಾನೆ. ಬೆಂಗಳೂರಿನಲ್ಲಿ ನಿಮ್ಮ ಆಟೋಚಾಲಕ ನನ್ನ ಮೇಲೆ ದೈಹಿಕವಾಗಿ ಅಲ್ಲೆ ಮಾಡಿದ್ದಾನೆ. ಈ ಬಗ್ಗೆ ವರದಿ ಮಾಡಿದ್ದರೂ, ನಿಮ್ಮ ಕಸ್ಟಮರ್‌ ಸಪೋರ್ಟ್‌ ಟೀಮ್‌ ಸ್ಪಂದನೆ ನೀಡುತ್ತಿಲ್ಲ. ತಕ್ಷಣವೇ ಕ್ರಮ ತೆಗೆದುಕೊಳ್ಳಿ’ ಎಂದು ನಿತಿ ಎನ್ನುವ ಮಹಿಳೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

Share Post