Cinema

ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ತಡೆಗೆ ಸಮಿತಿ ರಚಿಸಿ; ಸಿಎಂಗೆ ಮನವಿ

ಬೆಂಗಳೂರು; ಕೇರಳ ಚಿತ್ರರಂಗದಲ್ಲಿ ನಟಿಯರಿಗೆ ಲೈಂಗಿಕ ಕಿರುಕುಳ ಹೆಚ್ಚಾಗಿದೆ ಎಂಬ ಕಾರಣಕ್ಕೆ ಅಲ್ಲಿನ ಸರ್ಕಾರ ಹೇಮಾ ಕಮಿಟಿ ರಚನೆ ಮಾಡಿ, ವರದಿ ತಯಾರಿಸಿದೆ.. ವರದಿ ಪ್ರಕಾರ ಈಗ ಕ್ರಮಕ್ಕೆ ಮುಂದಾಗಿದೆ.. ಅದೇ ರೀತಿ ಕನ್ನಡ ಚಿತ್ರರಂಗದಲ್ಲೂ ಇದೇ ಪರಿಸ್ಥಿತಿ ಇದ್ದು, ಇಲ್ಲೂ ಕೂಡಾ ಸಮಿತಿ ರಚನೆ ಮಾಡಬೇಕು ಎಂದು ನಟ ಚೇತನ್‌ ನೇತೃತ್ವದ ಫೈರ್‌ ಸಂಸ್ಥೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.. ಇಂದು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ ತಂಡ, ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ಕಿರುಕುಳ ತಡೆಗೆ ಸಮಿತಿ ರಚಿಸಿ ಎಂದು ಮನವಿ ಮಾಡಿತು..

ಇದನ್ನೂ ಓದಿ; ಅಂಬುಲೆನ್ಸ್‌ನಲ್ಲಿ ಮಹಿಳೆಗೆ ಕಿರುಕುಳ ಕೊಟ್ಟ ಚಾಲಕ!; ಮುಂದೇನಾಯ್ತು?

ಈ ಹೋರಾಟಕ್ಕೆ ಸ್ಯಾಂಡಲ್‌ವುಡ್ ನಟ ಸುದೀಪ್, ರಮ್ಯಾ ಕೂಡಾ ಬೆಂಬಲ ಸೂಚಿಸಿದ್ದಾರೆ.. ಇನ್ನು ಶ್ರದ್ಧಾ ಶ್ರೀನಾಥ್, ನೀತು, ಚೇತನ್ ಅಂಹಿಸಾ ಸೇರಿದಂತೆ 140ಕ್ಕೂ ಹೆಚ್ಚು ಕಲಾವಿದರು, ತಂತ್ರಜ್ಞರು ಮತ್ತು ಸಾಹಿತಿಗಳು ಸಮಿತಿ ರಚನೆಗೆ ಆಗ್ರಹ ಮಾಡಿದ್ದಾರೆ.. ಎಲ್ಲರ ಸಹಿಗಳುಳ್ಳ ಮನವಿ ಪತ್ರವನ್ನು ಸಿಎಂಗೆ ಹಸ್ತಾಂತರ ಮಾಡಲಾಗಿದೆ.. ಮನವಿ ಸ್ವೀಕರಿಸಿ ಮಾತನಾಡಿದ ಸಿಎಂ ಸಿದ್ದರಾಮುಯ್ಯ, ಸಮಿತಿ ರಚನೆ ಮಾಡುವ ಸಂಬಂಧ ಸದ್ಯದಲ್ಲೇ ಒಂದು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.. ಸೆಪ್ಟೆಂಬರ್‌ 10ರ ಬಳಿಕ ಮತ್ತೆ ಸಭೆ ಸೇರಿ ತೀರ್ಮಾನ ಮಾಡೋಣ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ. ಸಿಎಂ ಜೊತೆಗಿನ ಸಭೆಯಲ್ಲಿ ನಟ ಚೇತನ್ ಜೊತೆ ನೀತು ಶೆಟ್ಟಿ, ಶೃತಿ ಹರಿಹರನ್, ಹಿರಿಯ ಪತ್ರಕರ್ತೆ ವಿಜಯಮ್ಮ ಭಾಗಿಯಾಗಿದ್ದರು.

ಇದನ್ನೂ ಓದಿ; ದರ್ಶನ್‌ನ ಮದುವೆಯಾಗ್ತೀನಿ ಅಂತ ಜೈಲಿಗೆ ಬಂದ ಮಹಿಳಾ ಅಭಿಮಾನಿ!

 

Share Post