Cinema

ಮೇ 20ಕ್ಕೆ ಭೂಲ್‌ ಭುಲಯ್ಯ – 2 ತೆರೆಗೆ

ಮುಂಬೈ : ನಟ ಕಾರ್ತಿಕ್‌ ಆರ್ಯನ್‌ ಅಭಿನಯದ ಭೂಲ್‌ ಭುಲಯ್ಯ 2 ಸಿನಿಮಾ ಮೇ 20ಕ್ಕೆ ತೆರೆ ಕಾಣಲು ಸಜ್ಜಾಗಿದೆ. ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಅಧಿಕೃತ ಘೋಷಣೆ ಮಾಡಿದೆ.

ಮಾರ್ಚ್‌ 20 ಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಆದರೆ ರಾಜ್‌ಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ ಮಾರ್ಚ್‌ 25ಕ್ಕೆ ತೆರೆ ಕಾಣ್ತಿರುವ ಕಾರಣದಿಂದಾಗಿ ತಮ್ಮ ಸಿನಿಮಾ ರಿಲೀಸ್‌ ಅನ್ನು ಕೊಂಚ ಮುಂದಕ್ಕೆ ಹಾಕಿಕೊಂಡಿದ್ದಾರೆ.

ಭೂಲ್‌ ಭುಲಯ್ಯ 2 ಸಿನಿಮಾ 2007ರಲ್ಲಿ ಅಕ್ಷಯ್‌ ಕುಮಾರ್‌ ಮತ್ತು ವಿದ್ಯಾ ಬಾಲನ್‌ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿದ್ದ ಸೂಪರ್‌ ಹಿಟ್‌ ಕಾಮಿಡಿ ಹಾರರ್‌ ಸಿನಿಮಾ ಭೂಲ್‌ ಭುಲಯ್ಯ ಸಿನಿಮಾದ ಸೀಕ್ವೆಲ್‌ ಆಗಿದೆ.

ಕಾರ್ತಿಕ್‌ ಆರ್ಯನ್‌ ಜೊತೆ ಈ ಸಿನಿಮಾದಲ್ಲಿ ಕಯಾರಾ ಅಡ್ವಾಣಿ, ಟಬು ಕೂಡ ನಟಿಸಿದ್ದಾರೆ.

Share Post