CrimeSports

ಕ್ರಿಕೆಟ್‌ ಆಟಗಾರ ಕಾರಿಯಪ್ಪ ಪ್ರೇಯಸಿಗೆ ನೊಟೀಸ್‌ ಜಾರಿ

ಬೆಂಗಳೂರು; ಮದುವೆಯಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಕ್ರಿಕೆಟಿಗ ಕಾರಿಯಪ್ಪ ವಿರುದ್ಧ ಯುವತಿಯೊಬ್ಬರು ದೂರು ನೀಡಿದ್ದರು. ಇದೀಗ ಪೊಲೀಸರು ಆಕೆಗೆ ನೊಟೀಸ್‌ ಜಾರಿ ಮಾಡಿದ್ದಾರೆ. ಠಾಣೆಗೆ ಬಂದು ಘಟನೆ ಬಗ್ಗೆ ವಿವರಣೆ ನೀಡುವಂತೆ ಯುವತಿಗೆ ಆರ್‌ಟಿ ನಗರ ಪೊಲೀಸರು ನೊಟೀಸ್‌ ಜಾರಿ ಮಾಡಿದ್ದಾರೆ. ಯುವತಿಯಿಂದ ಹೇಳಿಕೆ ಪಡೆದ ಮೇಲೆ ಕ್ರಕೆಟಿಗ ಕಾರಿಯಪ್ಪಗೂ ಪೊಲೀಸರು ನೊಟೀಸ್‌ ಜಾರಿ ಮಾಡಲಿದ್ದಾರೆ.

ಒಂದೂವರೆ ವರ್ಷದ ಹಿಂದೆ ಕ್ರಿಕೆಟಿಗ ಕಾರಿಯಪ್ಪಗೆ ಮಹಿಳೆಯ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದ, ನಂತರ ಬಂದ ಮನಸ್ತಾಪದಿಂದಾಗಿ ದೂರವಾಗಿದ್ದರು. ಇದೀಗ ಇಬ್ಬರೂ ಪರಸ್ಪರರ ವಿರುದ್ಧ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ.

ಮಹಿಳೆಗೆ 2018 ರಲ್ಲಿ ಮೊದಲ ಮದುವೆಯಾಗಿತ್ತು. 2020 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಳು. ಇದಾದ ಮೇಲೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದೂವರೆ ವರ್ಷದ ಹಿಂದೆ ಕಾರಿಯಪ್ಪ ಪರಿಚಯವಾಗಿತ್ತು. ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಬೆಳೆಸಿದ್ದರು ಎಂದು ಮಹಿಳೆ ಕಾರಿಯಪ್ಪ ವಿರುದ್ಧ ಆರೋಪ ಮಾಡಿದ್ದಾಳೆ. ನಾನು ಗರ್ಭಿಣಿ ಕೂಡಾ ಆಗಿದ್ದೆ, ಒತಾಯದಿಂದ ಗರ್ಭಪಾತ ಮಾಡಿಸಲಾಗಿತ್ತು ಎಂದೂ ಆರೋಪ ಮಾಡಲಾಗಿದೆ.

 

Share Post