CrimeDistricts

ಜಿಲ್ಲಾ ಕಾರಾಗೃಹದ ಮೇಲೆ ದಿಢೀರ್‌ ದಾಳಿ; ಮೊಬೈಲ್‌ಗಳು, ಗಾಂಜಾ ಪತ್ತೆ

ಹಾಸನ; ಹಾಸನ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರು ದಿಢೀರ್‌ ದಾಳಿ ಮಾಡಿದ್ದಾರೆ. ಈ ವೇಳೆ ಕಾರಾಗೃಹದ ಖೈದಿಗಳು ಮೊಬೈಲ್‌ ಬಳಸುತ್ತಿರುವುದು, ಮಾದಕ ವಸ್ತುಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಪರಿಶೀಲನೆ ವೇಳೆ 17 ಮೊಬೈಲ್‌ಗಳು, ಚಾರ್ಜರ್‌ಗಳು, ಗಾಂಜಾ, ಬೀಡಿಗಳು, ಸಿಗರೇಟ್‌ಗಳು ಸಿಕ್ಕಿವೆ. ಇವು ಜೈಲಿನೊಳಗೆ ಹೇಗೆ ಸಪ್ಲೈ ಆದವು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಹಾಸನದ ಸಂತೆಪೇಟೆಯ ಜಿಲ್ಲಾ ಕಾರಾಗೃಹದಲ್ಲಿ ಈ ವಸ್ತುಗಳು ಪತ್ತೆಯಾಗಿವೆ. ಎಸ್ಪಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ತಮ್ಮಯ್ಯ ಹಾಗೂ ಇನ್ಸ್‌ಪೆಕ್ಟರ್ ರೇವಣ್ಣ ನೇತೃತ್ವದಲ್ಲಿ 60 ಪೊಲೀಸ್‌ ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ. ಜನವರಿಯಲ್ಲಿ ಕೂಡಾ ದಾಳಿ ನಡೆಸಲಾಗಿತ್ತು. ಆದಲೂ ಮೊಬೈಲ್‌ಗಳು, ಚಾಕುಗಳು, ಗಾಂಜಾ ಮತ್ತಿತರ ವಸ್ತುಗಳು ಪತ್ತೆಯಾಗಿದ್ದವು. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರೂ ಮತ್ತೆ ಅದೇ ಕಥೆ ಮುಂದುವರೆದಿದೆ.

 

Share Post