ವಾಣಿಜ್ಯ ಕಟ್ಟಡದಲ್ಲಿ ಅಗ್ನಿ ಅವಘಡ: ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ರಾಜ್‌ಬಾಗ್ ಪ್ರದೇಶದ ವಾಣಿಜ್ಯ ಕಟ್ಟಡದಲ್ಲಿ ಗುರುವಾರ ಅಗ್ನಿ ಅವಘಡ ಉಂಟಾಗಿದೆ. ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿವರೆಗೂ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ. ಆದರೆ ಬೆಂಕಿ ನಂದಿಸುವ ವೇಳೆ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸಿಬ್ಬಂದಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದುರಂತದ ಬಗ್ಗೆ ವಿಭಾಗೀಯ ಅಗ್ನಿಶಾಮಕ ಸಿಬ್ಬಂದಿ ಮಾಹಿತಿ ನೀಡಿ, ಇದೊಂದು ವಾಣಿಜ್ಯ ಕಟ್ಟಡ ಸಂಕೀರ್ಣವಾಗಿದ್ದು, ಪ್ರಾಣಹಾನಿ ಉಂಟಾಗಿರುವ ಬಗ್ಗೆ ಕಾರ್ಯಾಚರಣೆ ಮಾಡುತ್ತಿದ್ದೇವೆ. ಕಟ್ಟಡದ ಒಳಗಡೆ ಒಂದು ಸಿಲಿಂಡರ್ ಮತ್ತು ಸೀಮೆಎಣ್ಣೆ ಚಾಲಿತ ಒಂದು ಜನರೇಟರ್ ಇತ್ತು ಎಂದು ತಿಳಿಸಿದ್ದಾರೆ.
J&K: Fire broke out in a building in Rajbagh, Srinagar.
"It's commercial building. Fire under control.We're seeing if there's any victim;nothing so far. One cylinder exploded&there was one generator running on kerosene. One of our officers injured," Divisional Fire Officer says pic.twitter.com/We2fTrjO2S
— ANI (@ANI) January 27, 2022