CrimeInternational

ಪತ್ನಿಗೆ ಡ್ರಗ್ಸ್‌ ಕೊಟ್ಟು ಪರ ಪುರುಷರಿಂದ ಅತ್ಯಾಚಾರ ಮಾಡಿಸುತ್ತಿದ್ದ ಪಾಪಿ ಗಂಡ..!

ಪ್ಯಾರಿಸ್; ಪತ್ನಿಗೆ ಡ್ರಗ್ಸ್‌ ಕೊಟ್ಟು, ಆಕೆ ಪ್ರಜ್ಞಾಹೀನಳಾದಾಗ ಆಕೆ ಮೇಲೆ ಪರ ಪುರುಷರಿಂದ ಅತ್ಯಾಚಾರ ಮಾಡಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪ್ಯಾರಿಸ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಹಲವು ಆರೋಪಗಳ ಮೇಲೆ ಸುಮಾರು 59 ಪುರುಷರನ್ನು ಬಂಧಿಸಲಾಗಿದ್ದು, ಇದರಲ್ಲಿ ಡೊಮಿನಿಕ್‌ ಎಂಬಾತ, ತನ್ನ ಸ್ವಂತ ಪತ್ನಿಯನ್ನೇ ಬೇರೆ ಪುರುಷರಿಂದ ಅತ್ಯಾಚಾರ ಮಾಡಿಸುತ್ತಿದ್ದ ಪೈಶಾಚಿಕ ಕೃತ್ಯದ ಬಗ್ಗೆ ವಿಚಾರಣೆ ವೇಳೆ ಗೊತ್ತಾಗಿದೆ. 

ಪ್ರಕರಣ ಸಂಬಂಧ 25 ರಿಂದ 55 ವರ್ಷ 60 ಪುರುಷರನ್ನು ಬಂಧಿಸಲಾಗಿದೆ. ಇದರಲ್ಲಿ ಚಾಲಕರು, ಪಾಲಿಕೆ ಕೌನ್ಸಿಲರ್‌, ವಿದ್ಯಾರ್ಥಿ, ಬ್ಯಾಂಕ್‌ ನೌಕರ, ಪತ್ರಕರ್ತ, ಜೈಲು ಸಿಬ್ಬಂದಿ ಕೂಡಾ ಸೇರಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಮಹಿಳೆಗೆ ಗೊತ್ತಿಲ್ಲದೆ ಈ ಕೆಲಸ ಮಾಡಿಸಲಾಗಿದೆ. ಡೊಮಿನಿಕ್‌ ಹಾಗೂ ಅತ್ಯಾಚಾರ ಸಂತ್ರಸ್ತೆ ಪತ್ನಿಗೆ ಮೂವರು ಮಕ್ಕಳಿದ್ದಾರೆ. ಆದ್ರೆ ಡೊಮಿನಿಕ್‌ ಅದೇನು ಹುಚ್ಚೋ ಏನೋ ಪ್ರತಿ ರಾತ್ರಿ ಹೆಂಡತಿಗೆ ಊಟದಲ್ಲಿ ಲೊರಾಜೆಪಮ್ ಆಂಟಿ-ಆಂಗ್ಲೇಶನ್ ಡ್ರಗ್ ಬೆರಸಿಕೊಡುತ್ತಿದ್ದನಂತೆ.  ಆಕೆ ಅರೆ ಪ್ರಜ್ಞಾವಸ್ಥೆಗೆ ತಲುಪಿದ ನಂತರ ಬೇರೆ ಪುರುಷರನ್ನು ಕರೆಸಿ ಅತ್ಯಾಚಾರ ಮಾಡಿಸುತ್ತಿದ್ದನಂತೆ. ಅಲ್ಲದೆ ಅದನ್ನು ವಿಡಿಯೋ ಮಾಡಿ ಸೇವ್‌ ಮಾಡಿಟ್ಟುಕೊಳ್ಳುತ್ತಿದ್ದನಂತೆ.

2011ರಿಂದ 2020ರ ಅವಧಿಯಲ್ಲಿ ಈ ಕೃತ್ಯಗಳನ್ನು ಎಸಗಲಾಗಿದೆ. ಪರ ಪುರುಷರನ್ನು ಕರೆಸುತ್ತಿದ್ದ ಆತ ಅಕ್ಕಪಕ್ಕದವರಿಗೆ ಗೊತ್ತಾಗದಂತೆ ಕೂಡಾ ಎಚ್ಚರ ವಹಿಸಿದ್ದ. ಬರುವವರು ವಾಹನಗಳನ್ನು ದೂರದಲ್ಲೇ ನಿಲ್ಲಿಸಿ ಬರುವಂತೆ ಸೂಚಿಸುತ್ತಿದ್ದ ಎನ್ನಲಾಗಿದೆ.

 

Share Post