ಮಕ್ಕಳೊಂದಿಗೆ ಮಗುವಾಗಿ ಬೆರೆತು ಆಟವಾಡಿದ ಶಿವಣ್ಣ: ವಿಡಿಯೋ ವೈರಲ್
ಬೆಂಗಳೂರು: ದೊಡ್ಮನೆ ಮಕ್ಕಳು ಅಂತ ಜನ ಸುಮ್ಮನೆ ಕರೆಯೋಲ್ಲ. ಅವರ ನಡೆ, ನುಡಿ, ಜವಾಬ್ದಾರಿ, ಇತರರಿಗೆ ನೀಡುವ ಗೌರವ ಎಲ್ಲವೂ ಇವರಲ್ಲಿವೆ. ಮಕ್ಕಳಿಂದ ಹಿರಿಯರವರೆಗೆ ಎಲ್ಲರನ್ನು ಪ್ರೀತಿಯಿಂದ ಕಾಣುವ ಮನೋಭಾವ ಇವರದ್ದು. ಇದಕ್ಕೆ ನಿದರ್ಶನವಾಗಿ ಎಷ್ಟೋ ಕೆಲಸಗಳಿವೆ ಅದರ ಜೊತೆಗೆ ರಸ್ತೆಗಿಳಿದು ಜನ ಸಾಮಾನ್ಯನಂತೆ ಮಕ್ಕಳ ಜೊತೆಗೆ ಆಟವಾಡುವ ಹೃದಯ ಶ್ರೀಮಂತಿಕೆ ಮಾತ್ರ ಎಲ್ಲಾ ನಟರಿಗೂ ಇರಲ್ಲ.
ಹೌದು ಸ್ಯಾಂಡಲ್ವುಡ್ ನಟ ಶಿವರಾಜ್ಕುಮಾರ್ ಮಕ್ಕಳೊಂದಿಗೆ ಬೆರೆತು ಖೋ..ಖೋ..ಆಟ ಆಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಶಿವಣ್ಣನ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲಿಯೂ ಸ್ಟಾರ್ ನಟ ಎಂಬ ದರ್ಪವಿಲ್ಲದೆ ಮಕ್ಕಳೊಂದಿಗೆ ಬೆರೆತು ಆಟವಾಡುವ ವಿಡಿಯೋ ಅಭಿಮಾನಿಗಳಿಗೆ ಆನಂದವುಂಟುಮಾಡಿದೆ. ಮಕ್ಕಳಿಗೂ ಕೂಡ ಹೆಸರಾಂತ ನಟ ನಮ್ಮೊಂದಿಗೆ ಆಟ ಆಡ್ತಿದಾರೆ ಎಂಬ ಖುಷಿಯಲ್ಲಿ ಉತ್ಸಾಹದಿಂದ ಆಟದಲ್ಲಿ ಮಗ್ನರಾಗಿದ್ದಾರೆ.
ಮಕ್ಕಳ ಪೋಷಕರು ವಿಡಿಯೋ ಮಾಡುತ್ತಾ ಪ್ರೋತ್ಸಾಹ ನೀಡಿದ್ದಾರೆ. ಶಿವಣ್ಣ ಕೇವಲ ಸಿನಿಮಾ ಅಷ್ಟೇ ಅಲ್ಲ, ಒಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್ ಮನೆಯವರಿಗೆ ಸಮಯ ನೀಡೋದು, ಆಗಾಗ ಹೀಗೆ ಹೊರಗಡೆ ಜನ ಮತ್ತು ಮಕ್ಕಳೊಂದಿಗೆ ಬೆರೆತು ತಮ್ಮ ಸಮಯವನ್ನು ಆನಂದದಿಂದ ಕಳೆಯುತ್ತಾರೆ.