Crime

ಮುಂಬೈನ ವಸತಿ ಕಟ್ಟಡದಲ್ಲಿ ಬೆಂಕಿ ದುರಂತ

ಮುಂಬೈ: ಇಲ್ಲಿ ಏಕ್ತಾ ನಗರದ ಮಾಡಾ ವಸತಿ ಸಂಕೀರ್ಣದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು. ಮಾಡಾ ಕಟ್ಟಡ ಸಂಖ್ಯೆ ೧೦ರ ಮೊದಲ ಮಹಡಿಯ ಮೀಟರ್‌ ಕೋಣೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ತುಂಬಾ ದಟ್ಟ ಹೊಗೆ ಆವರಿಸಿತ್ತು. ಇದರಿಂದಾಗಿ ಹಲವಾರು ಮಂದಿ ಉಸಿರುಗಟ್ಟಿ ಮೂರ್ಚೆ ಹೋಗಿದ್ದರು. ಕೆಲವರಿಗೆ ಬೆಂಕಿಯಿಂದ ಸುಟ್ಟ ಗಾಯಗಳಾಗಿವೆ. ಎಲ್ಲರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ.

ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ತಂಡವು ಸ್ಥಳಕ್ಕೆ ತಲುಪುವ ಮೊದಲೇ, ಸ್ಥಳೀಯ ನಿವಾಸಿಗಳು ನೆರವಿಗೆ ಬಂದು ದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾರೆ. ಬೆಂಕಿಯನ್ನು ನಂದಿಸಿ, ಕಟ್ಟಡದಲ್ಲಿದ್ದವರನ್ನು ರಕ್ಷಿಸಿದ್ದಾರೆ. ಖಾಸಗಿ ವಾಹನಗಳು ಮತ್ತು ಆಟೋ ರಿಕ್ಷಾಗಳ ಮೂಲಕ ಗಾಯಗಗಳನ್ನು ಆಸ್ಪತ್ರೆಗೆ ಕರೆದೊಯ್ದರು.

Share Post