CrimeNational

ಮರ್ಸಿಡಿಸ್‌ ಕಾರಿಗೆ ಡಿಕ್ಕಿ; ಎರಡು ಭಾಗವಾದ ಟ್ರ್ಯಾಕ್ಟರ್‌..!

ಅಮರಾವತಿ; ಶರವೇಗದಲ್ಲಿ ಬರುತ್ತಿದ್ದ ಮರ್ಸಿಡಿಸ್‌ ಕಾರಿಗೆ ಡಿಕ್ಕಿ ಹೊಡೆದ ಟ್ರ್ಯಾಕ್ಟರ್‌ ಎರಡು ಭಾಗವಾಗಿರುವ ಘಟನೆ ಆಂಧ್ರಪ್ರದೇಶದ ತಿರುಪತಿ ಬಳಿ ನಡೆದಿದೆ. ಘಟನೆಯಲ್ಲಿ ಬೆಂಜ್‌ ಕಾರಿನ ಒಂದು ಭಾಗ ಕೂಡಾ ಜಖಂಗೊಂಡಿದೆ. 

ಚಂದ್ರಗಿರಿ ಬೈಪಾಸ್‍ನಲ್ಲಿ ಈ ದುರ್ಘಟನೆ ನಡೆದಿದೆ. ಎದುರಿನಿಂದ ಬರುತ್ತಿದ್ದ ಟ್ರ್ಯಾಕ್ಟರ್ ರಾಂಗ್ ಸೈಡ್ ಗೆ ಬಂದು ಕಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಘಟನೆಯ ಬಳಿಕ ಸ್ಥಳೀಯರು ವೀಡಿಯೋ ಮಾಡಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ವೀಡಿಯೊದಲ್ಲಿ, ಟ್ರ್ಯಾಕ್ಟರ್ ಎರಡು ಭಾಗಗಳಾಗಿದ್ದು ಹಾಗೂ ಕಾರಿನ ಮುಂಭಾಗ ಸಂಪೂರ್ಣ ಹಾನಿಗೊಳಗಾಗಿದೆ. ಅವಘಡದಿಂದಾಗಿ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಟ್ರ್ಯಾಕ್ಟರ್ ಚಾಲಕನಿಗೆ ಕೂಡಾ ಸಣ್ಣಪುಟ್ಟ ಗಾಯಗಳಾಗಿವೆ.

 

Share Post