CrimeDistrictsHealth

ಏಳು ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ; 4 ವರ್ಷದ ಬಾಲಕಿ ದುರ್ಮರಣ!

ರಾಯಚೂರು; ಬೀದಿ ನಾಯಿಗಳು ಅದ್ಯಾಕೆ ಮಕ್ಕಳ ಮೇಲೆ ಮುಗಿ ಬೀಳುತ್ತವೋ ಗೊತ್ತಿಲ್ಲ.. ನಾಯಿಗಳ ದಾಳಿಯಿಂದ ಮಕ್ಕಳ ಸಾವಿನ ಪ್ರಕರಣ ಆಗಾಗ ನಡೆಯುತ್ತಲೇ ಇವೆ.. ರಾಯಚೂರಿನಲ್ಲಿ ಕೂಡಾ ಈ ಬೀದಿಗಳ ನಾಯಿಗಳ ದಾಳಿಗೆ ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.. ಬೀದಿಯಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ನಾಲ್ಕೈದು ನಾಯಿಗಳು ದಾಳಿ ಮಾಡಿದ್ದು, ಬಾಲಕಿ ಸಾವನ್ನಪ್ಪಿದ್ದಾಳೆ.. ರಾಯಚೂರು ಜಿಲ್ಲೆ ರಾಯಚೂರು ತಾಲೂಕಿನ ಕೊರವಿಹಾಳ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಲಾವಣ್ಯ (4) ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ..
ಕೀರಲಿಂಗ ಎಂಬುವವರ ಮಗಳ ಲಾವಣ್ಯ ಮನೆಯ ಬಳಿ ಆಟವಾಡುತ್ತಿದ್ದಳು.. ಈ ವೇಳೆ ನಾಯಿಗಳು ಬಾಲಕಿ ಮೇಲೆ ದಾಳಿ ಮಾಡಿ ತೀವ್ರವಾಗೊ ಕಚ್ಚಿವೆ.. ಒಂದು ನಾಯಿಗೆ ಲಾವಣ್ಯ ಕತ್ತಿನ ಭಾಗದಲ್ಲಿ ಮಾರಣಾಂತಿಕವಾಗಿ ಕಚ್ಚಿತ್ತು.. ಇದರಿಂದಾಗಿ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದಳು.. ಮನೆಯವರು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು.. ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮನೆಯಲ್ಲಿದ್ದ ಬಾಲಕಿ ದಿಢೀರ್‌ ಸಾವನ್ನಪ್ಪಿದ್ದಾಳೆ..
ಈ ಕೊರವಿಹಾಳ ಗ್ರಾಮದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ.. ಕಳೆದ 15 ದಿನಗಳ ಅಂತರದಲ್ಲಿ ಏಳು ಮಕ್ಕಳ ಮೇಲೆ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.. ಘಟನೆ ಬಳಿಕ ಗ್ರಾಮಸ್ಥರು ಬೀದಿ ನಾಯಿಗಳನ್ನು ಸಾಯಿಸುತ್ತಿದ್ದಾರೆ.. ಇಷ್ಟೆಲ್ಲಾ ಆದರೂ ಅಧಿಕಾರಿಗಳು ಇತ್ತ ಧಾವಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

Share Post