CrimeDistricts

ಮೊಬೈಲ್‌ಗಾಗಿ ಜಗಳ; ಮಗನನ್ನೇ ಕೊಂದ ಅಪ್ಪ!

ಮೈಸೂರು; ಮೊಬೈಲ್‌ಗಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ತಂದೆಯೊಬ್ಬ ಮಗನನ್ನೇ  ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಬನ್ನಿಮಂಟಪ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದವನನ್ನು ಉಮೇಜ್‌ ಎಂದು ಗುರುತಿಸಲಾಗಿದೆ.

ಮೊಬೈಲ್‌ ಬಳಸುವ ವಿಚಾರಕ್ಕೆ ಅಪ್ಪ-ಮಗನ ಜೊತೆ ಜಗಳವಾಗಿದೆ. ಮೊಬೈಲ್‌ ಹೆಚ್ಚಾಗಿ ಬಳಸಬೇಡ ಎಂದರೂ ಮಗ ಕೇಳಿಲ್ಲ. ಇದರಿಂದಾಗಿ ಇಬ್ಬರ ನಡುವೆ ದೊಡ್ಡ ಜಗಳವಾಗಿದೆ. ಇದೇ ಕೋಪದಲ್ಲಿ ಅಪ್ಪ ಅಸ್ಲಂಪಾಷಾ ಮಗ ಉಮೇಜ್‌ಗೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಉಮೇಜ್‌ ಸಾವನ್ನಪ್ಪಿದ್ದಾನೆ. ಎನ್‌ಆರ್‌ ಠಾಣೆ ಪೊಲೀಸರು ಆರೋಪಿ ಅಸ್ಲಂಪಾಷಾನನ್ನು ಬಂಧಿಸಿದ್ದಾರೆ.

 

Share Post