ಜ.23ರ ಭಾನುವಾರ ತಮಿಳುನಾಡು ಪೂರ್ತಿ ಲಾಕ್‌ಡೌನ್..!
ಚೆನ್ನೈ: ತಮಿಳುನಾಡಿನಲ್ಲಿ ಕೊವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ವೀಕೆಂಡ್‌ನಲ್ಲಿ ಜನರು ಹೆಚ್ಚಾಗಿ ಓಡುತ್ತಿರುವುದರಿಂದ ಕೊವಿಡ್ ಜಾಸ್ತಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಜನವರಿ 23ರ ಭಾನುವಾರ ಇಡೀ ತಮಿಳುನಾಡಿನಾದ್ಯಂತ ಲಾಕ್‌ಡೌನ್ ಮಾಡಲು ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಘೋಷಣೆ ಮಾಡಿದ್ದಾರೆ. ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ತಮಿಳುನಾಡು ಲಾಕ್‌ಡೌನ್ ಮಾಡುತ್ತಿರುವುದಾಗಿ ಅವರು ಪ್ರಕಟಿಸಿದ್ದಾರೆ.