Crime

ಭೀಕರ ರಸ್ತೆ ಸರಣಿ ಅಪಘಾತ: ಕಿಲೋಮೀಟರ್‌ ಟ್ರಾಫಿಕ್‌ ಜಾಮ್‌

ತುಮಕೂರು: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ರಸ್ತೆ ಅಪಘಾತವಾಗಿದೆ. ತುಮಕೂರಿನ ಟಿ.ಬೇಗೂರಿನ ಬಳಿ ಬೆಳ್ಳಂಬೆಳಗ್ಗೆ ಅಪಘಾತವಾಗಿ ಸುಮಾರು ಮೂರು ಕಿಲೋಮೀಟರ್‌ವರೆಗೆ ಟ್ರಾಫಿಕ್‌ ಜಾಮ್‌ ಉಂಟಾಯಿತು. ನಸುಕಿನ ಜಾವ ಮಂಜು ಕವಿದ ವಾತಾವರಣವಿದ್ದ ಕಾರಣ ಈ ದುರಂತ ಸಂಭವಿಸಿದೆ. ಲಾರಿ, ಬಸ್‌, ಟೆಂಪೋ ನಡುವೆ ಅಪಘಾತ ನಡೆದಿದ್ದು ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ. ವಾಹನಗಳು ಸಂಪೂರ್ಣ ನಜ್ಜು-ಗುಜ್ಜಾಗಿವೆ.  ಪರಿಣಾಮ ಟ್ರಾಫಿಕ್‌ ದಟ್ಟಣೆ ಉಂಟಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿ ಪ್ರಕರಣ ದಾಖಲು ಮಾಡಿಕೊಂಡ್ರು. ಟ್ರಾಫಿಕ್‌ ಸಮಸ್ಯೆ ನಿವಾರಿಸಲು ಖಾಕಿಗೆ ದೊಡ್ಡ ತಲೆನೋವಾಯಿತು.

Share Post