Bengaluru

ಕಾವೇರಿದ ಕರವೇ ಪ್ರತಿಭಟನೆ: ಪ್ರತಿಭಟನಾಕಾರರು ಖಾಕಿ ವಶಕ್ಕೆ

ಬೆಂಗಳೂರು: ಕರ್ನಾಟಕದಲ್ಲಿ ಎಂಇಎಸ್‌ ಬ್ಯಾನ್‌ ಮಾಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಕರವೇ ಕಾರ್ಯಕರ್ತರ ಪ್ರತಿಭಟನೆ ಬಿಸಿ ತಾರಕಕ್ಕೇರಿದೆ. ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ನೋಡನೋಡುತ್ತಾ ಉಗ್ರರೂಪ ಪಡೆದುಕೊಂಡಿದೆ. ಟೌನ್ ಹಾಲ್‌ ಸರ್ಕಲ್‌ನಿಂದ ಹಿಡಿದು ರಾಜಭವನ ಚಲೋ  ನಡೆಸುತ್ತಿದ್ದ ಪ್ರತಿಭಟನೆಗೆ ಪೊಲೀಸರು ಬ್ರೇಕ್‌ ಹಾಕಿದ್ರು. ಪ್ರತಿಭಟನೆ ನಡೆಸದಂತೆ ಪೊಲೀಸರ ಮನವಿಗೆ ಜಗ್ಗದ ಕಾರಣ ಕರವೇ ನಾರಾಯಣಗೌಡ ಸೇರಿದಂತೆ ಹಲವಾರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡ್ರು. ನಾರಾಯಣಗೌಡ ಇದ್ದ ತೆರೆದ ವಾಹನವನ್ನು ಹತ್ತಿ ಪೊಲೀಸ್‌ ಅಧಿಕಾರಿಯಬ್ಬರು  ಚಲಾಯಿಸಿ  ಪ್ರತಿಭಟನೆಗೆ ತಡೆಯೊಟ್ಟಿದ್ರು. ಪ್ರತಿಭಟನಾಕಾರರನ್ನು ಬಿಎಂಟಿಸಿ ಬಸ್‌ಗಳಲ್ಲಿ ಹತ್ತಿಸಿಕೊಂಡು ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಪಟ್ಟರು. ಮಹಿಳಾ ಕಾರ್ಯಕರ್ತರನ್ನು ಬಂಧಿಸಲು ಪೊಲೀಸರು ಹರಸಾಹಸ ಪಡ್ತಿದಾರೆ. ನೆಲದ ಮೇಲೆ ಬಿದ್ದು ಉರುಳಾಡಿ ನ್ಯಾಯ ಬೇಕೆಂದು ಹಠ ಹಿಡಿದ್ರು. ಬೆಳಗಾವಿ ನಮ್ಮದು..ಅಯ್ಯಯ್ಯೋ ಅನ್ಯಾಯ ಎಂದು ಎಂಇಎಸ್‌ ಮತ್ತು ಸರ್ಕಾರ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

Share Post