ಅವಮಾನ ಮಾಡಿದ್ದಕ್ಕೆ ಸೇಡು; ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ!
ಮಧ್ಯಪ್ರದೇಶ; ವ್ಯಕ್ತಿಯೊಬ್ಬ ಬೈಕ್‌ನಲ್ಲಿ ಹೋಗುತ್ತಿದ್ದಾಗ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕೆಸರು ಎಗರಿಸಿದ್ದ.. ಈ ವೇಳೆ ಕೋಪಗೊಂಡ ವಿದ್ಯಾರ್ಥಿನಿ ಆತನಿಗೆ ಅವಮಾನ ಮಾಡಿ ನಿಂದಿಸಿದ್ದಾಳೆ.. ಇದ್ರಿಂದ ಕೋಪಗೊಂಡ ಬೈಕ್ ಸವಾರ ಹಾಗೂ ಆತನ ಸ್ನೇಹಿತರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.. ಮಧ್ಯಪ್ರದೇಶದ ರೇವಾ ಎಂಬಲ್ಲಿ ಈ ಘಟನೆ ನಡೆದಿದೆ..
ವಿದ್ಯಾರ್ಥಿನಿ ಸೆಪ್ಟೆಂಬರ್ 22ರಂದು ಮೊಬೈಲ್ ರಿಪೇರಿ ಮಾಡಿಸಲೆಂದು ಮೊಬೈಲ್ ಅಂಗಡಿ ಹೋಗುತ್ತಿದ್ದಳು.. ಈ ವೇಳೆ ಈ ಘಟನೆ ನಡೆದಿದೆ.. ಕೆಸರು ಮೈಮೇಲೆ ಎಗರಿದ್ದಕ್ಕೆ ಕಾಲೇಜು ವಿದ್ಯಾರ್ಥಿನಿ ಆಕ್ರೋಶಗೊಂಡ ಬೈಕ್ ಸವಾರನಿಗೆ ಬೈದಿದ್ದಾಳೆ.. ಅವಮಾನಿಸಿದ್ದಾಳೆ.. ಇದರಿಂದ ಆಕ್ರೋಶಗೊಂಡ ಬೈಕ್ ಸವಾರ ತನ್ನ ಸ್ನೇಹಿತರನ್ನು ಕರೆಸಿಕೊಂಡಿದ್ದಾನೆ.. ವಿದ್ಯಾರ್ಥಿನಿಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ಯಲಾಗಿದೆ.. ಅಲ್ಲಿ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ತಿಳಿದುಬಂದಿದೆ..
ಪ್ರಮುಖ ಆರೋಪಿ ಕಿಶನ್ ಕೋಲ್ ಸೇರಿ ಎಲ್ಲಾ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.. ನಾನು ಬೈಕ್‌ನಲ್ಲಿ ಹೋಗುತ್ತಿದ್ದೆ… ರಸ್ತೆಯಲ್ಲಿ ತುಂಬಾ ಕೆಸರಿತ್ತು.. ಹೀಗಾಗಿ ಸ್ವಲ್ಪ ಆಕೆಯ ಮೇಲೆ ಎಗರಿದೆ.. ಅದಕ್ಕೆ ಆಕೆ ಎಲ್ಲರೆದುರೂ ನನಗೆ ಸಾಕಷ್ಟು ಅವಮಾನ ಮಾಡಿದಳು ಎಂದು ಆತ ಹೇಳಿಕೊಂಡಿದ್ದಾನೆ.. ಇದಾದ ಮೇಲೆ ಕಿಶನ್ ಕೋಲ್ ಮತ್ತು ಆತನ ಸ್ನೇಹಿತ ಸಂತಲಾಲ್ ಆಕೆಯನ್ನು ಅಪಹರಿಸಿ ಪೊದೆಗಳ ಮಧ್ಯೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.