BengaluruCrimePolitics

ಆಗಿನ ಸಿಎಂಗೆ ʻಆʼ ವಿಡಿಯೋ ತೋರಿಸಿದ್ದ ಮುನಿರತ್ನ!; ಸಂತ್ರಸ್ತೆ ಆರೋಪ

ಬೆಂಗಳೂರು; ಶಾಸಕ ಮುನಿರತ್ನ ವಿರುದ್ದ ಅತ್ಯಾಚಾರ ಹಾಗೂ ಹನಿಟ್ರ್ಯಾಪ್‌ಗೆ ಬಳಕೆ ಆರೋಪ ಮಾಡಿರುವ ಸಂತ್ರಸ್ತೆ ಈಗ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದಾರೆ.. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, ಶಾಸಕ ಮುನಿರತ್ನ ಅವರು ಮಾಜಿ ಮುಖ್ಯಮಂತ್ರಿಯೊಬ್ಬರ ಹನಿಟ್ರ್ಯಾಪ್‌ ಮಾಡಿಸಿದ್ದು, ಆ ವಿಡಿಯೋ ಮುನಿರತ್ನ ಬಳಿ ಇದೆ.. ಅದನ್ನು ತೋರಿಸಿಕೊಂಡೇ ಅವರು ಬ್ಲ್ಯಾಕ್‌ಮೇಲ್‌ ಮಾಡಿ ಮಂತ್ರಿ ಸ್ಥಾನ ಪಡೆದುಕೊಂಡಿದ್ದರು ಎಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ..
ಮುನಿರತ್ನ ಅವರ ಇಂತಹ ಹಲವಾರು ಕೃತ್ಯಗಳನ್ನು ಸಹಿಸೋದಕ್ಕೆ ಆಗದೆಯೇ ನಾನು ದೂರು ದಾಖಲು ಮಾಡಿದ್ದೇನೆ.. 2020ರಲ್ಲಿ ನನಗೆ ಶಾಸಕ ಮುನಿರತ್ನ ಪರಿಚಯವಾದರು.. ವೆಂಕಟೇಶ್‌ ಹಾಗೂ ಮಮತಾ ಅವರು ನನ್ನನ್ನು ಪರಿಚಯ ಮಾಡಿಸಿದರು.. ವಿಡಿಯೋ ಕಾಲ್‌ ಮಾಡಿ ಮಾತನಾಡುತ್ತಿದ್ದ ಅವರು ಒಂದು ಗೋಡೌನ್‌ಗೆ ಕರೆಸಿ ಅತ್ಯಾಚಾರ ಮಾಡಿದ್ದಾರೆ.. ಅವರು ಜಾಮೀನು ಪಡೆದು ಹೊರಬಂದರೆ ನನಗೆ ಜೀವ ಭಯವಿದೆ ಎಂದೂ ಆಕೆ ಹೇಳಿಕೊಂಡಿದ್ದಾಳೆ..

Share Post