BengaluruCrime

ಪವಿತ್ರಾಗೌಡಗೆ 200ಕ್ಕೂ ಹೆಚ್ಚು ಮೆಸೇಜ್‌ ಕಳುಹಿಸಿದ್ದ ರೇಣುಕಾಸ್ವಾಮಿ!

ಬೆಂಗಳೂರು; ನಟ ದರ್ಶನ್‌ ಅಂಡ್‌ ಗ್ಯಾಂಗ್‌ನಿಂದ ಕೊಲೆಯಾದ ರೇಣುಕಾಸ್ವಾಮಿ ನಿರಂತರವಾಗಿ ಪವಿತ್ರಾಗೌಡಗೆ ಮೇಸೇಜ್‌ಗಳು, ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದನಂತೆ ಬ್ಲ್ಯಾಕ್‌ ಮಾಡಿದರೂ ಕೂಡಾ ಫೇಕ್‌ ಅಕೌಂಟ್‌ ಕ್ರಿಯೇಟ್‌ ಮಾಡಿದರಿಂದ ಅದರಿಂದ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದ ಎಂದು ತಿಳಿದುಬಂದಿದೆ..
ರೇಣುಕಾಸ್ವಾಮಿ ಫೆಬ್ರವರಿ ತಿಂಗಳಿಂದಲೇ ಪವಿತ್ರಾಗೌಡನೇ ಮೆಸೇಜ್‌ಗಳನ್ನು ಕಳುಹಿಸಿದ್ದಾನೆ ಎಮಧು ತಿಳಿದುಬಂದಿದೆ.. ಇದುವರೆಗೆ ಪವಿತ್ರಾಗೌಡಗೆ ರೇಣುಕಾಸ್ವಾಮಿಯಿಂದ 200 ಕ್ಕೂ ಹೆಚ್ಚು ಮೆಸೇಜ್‌ಗಳು ಬಂದಿವೆ ಎಂದು ಹೇಳಲಾಗಿದೆ.. ಎಲ್ಲವೂ ಕೂಡಾ ಅತ್ಯಂತ ಅಶ್ಲೀಲ ಮೆಸೇಜ್‌ಗಳು ಎಂದು ಹೇಳಲಾಗುತ್ತಿದೆ..
ನಿರಂತರವಾಗಿ ಮೆಸೇಜ್‌ಗಳು ಬರುತ್ತಿದ್ದರಿಂದ ರೋಸಿಹೋಗಿದ್ದ ಪವಿತ್ರಾ ಗೌಡ, ಪವನ್‌ಗೆ ಮಾಹಿತಿ ನೀಡಿದ್ದಳಂತೆ.. ಪವನ್‌ ಅದನ್ನು ದರ್ಶನ್‌ಗೆ ಹೇಳಿದ್ದರಿಂದ ಇಷ್ಟರಲ್ಲಾ ಅವಾಂತರವಾಗಿದೆ ಎಂದು ತಿಳಿದುಬಂದಿದೆ..

Share Post