CrimeNational

ಸಂಸತ್ತಿನ ಭದ್ರತಾ ವೈಫಲ್ಯ ಪ್ರಕರಣ; ಶಾಕ್‌ ಕೊಟ್ಟು 70 ಖಾಲಿ ಪೇಪರ್‌ಗೆ ಸಹಿ ಆರೋಪ!

ನವದೆಹಲಿ; ಚಳಿಗಾಲದ ಅಧಿವೇಶನದ ವೇಳೆ ಸಂಸತ್ತಿನಲ್ಲಿ ಭದ್ರತಾ ಲೋಪ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಯುಎಪಿಎ ಅಡಿಯಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಆರು ಆರೋಪಿಗಳಲ್ಲಿ ಐದು ಆರೋಪಿಗಳು, ಪೊಲೀಸರ ವಿರುದ್ಧವೇ ಆರೋಪ ಮಾಡಿ ಅರ್ಜಿ ಸಲ್ಲಿಸಿದ್ದಾರೆ. ನಮಗೆ ವಿದ್ಯುತ್‌ ಶಾಕ್‌ ನೀಡಿ, ಬಲವಂತಾಗಿ 70 ಖಾಲಿ ಪೇಪರ್‌ಗಳ ಮೇಲೆ ಸಹಿ ಮಾಡಸಿಕೊಂಡಿದ್ದಾರೆ ಎಂದು ಆರೋಪಿಸಿ ಐವರು ಆರೋಪಿಗಳು ಪಟಿಯಾಲ ಹೌಸ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ನಮಗೆ ರಾಷ್ಟ್ರೀಯ ಪಕ್ಷವೊಂದರ ಜೊತೆ ಸಂಪರ್ಕ ಇದೆ. ಆರೋಪಿಗಳಲ್ಲಿ ಇಬ್ಬರಿಗೆ ವಿರೋಧ ಪಕ್ಷ ನಾಯಕರೊಬ್ಬರ ಜೊತೆ ಸಂಪರ್ಕ ಇದೆ ಎಂದು ಪೇಪರ್‌ಗಳಲ್ಲಿ ಬರೆಯಲಾಗಿದೆ. ಬಲವಂತವಾಗಿ ಇಂತಹ ಸುಳ್ಳು ಆರೋಪಗಳ ದಾಖಲೆಗಳಿಗೆ ನಮ್ಮ ಬಳಿ ಸಹಿ ಹಾಕಿಸಿಕೊಳ್ಳಲಾಗಿದೆ ಎಂದು ಪ್ರಕರಣದ ಐವರು ಆರೋಪಿಗಳು ಆರೋಪ ಮಾಡಿ, ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಮೈಸೂರು ಮೂಲದ ಆರೋಪಿ ಡಿ.ಮನೋರಂಜನ್, ಸಾಗರ್ ಶರ್ಮಾ, ಲಲಿತ್ ಝಾ, ಅಮೋಲ್ ಶಿಂಧೆ ಮತ್ತು ಮಹೇಶ್ ಕುಮಾವತ್ ಈ ಅರ್ಜಿ ಸಲ್ಲಿಸಿದ್ದಾರೆ. ಫೆಬ್ರವರಿ 17 ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ. ಇನ್ನು ಕೋರ್ಟ್‌ ಆರೋಪಿಗಳನ್ನು ಮಾರ್ಚ್‌ 1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

 

Share Post