Crime

ನಿಯಂತ್ರಣ ತಪ್ಪಿ ಟ್ರಕ್‌ ಪಲ್ಟಿ: ಪಾಟ್ನಾದಲ್ಲಿ ಮೂವರು ಪೊಲೀಸರ ದುರ್ಮರಣ

ಪಾಟ್ನಾ: ಪೊಲೀಸ್‌ ಜೀಪ್‌ ಮೇಲೆ ಟ್ರಕ್‌ ಒಂದು ಉರುಳಿಬಿದ್ದ ಪರಿಣಾಮ ಮೂವರು ಪೊಲೀಸರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಿಹಾರದ ಪಾಟ್ನಾ ಬಳಿ ನಡೆದಿದೆ. ಇಲ್ಲಿ ದಾನಾಪುರದಲ್ಲಿ ಬಳಿ ದುರಂತ ನಡೆದಿದ್ದು, ಟ್ರಕ್‌ ಚಾಲಕನ ಅತಿವೇಗದ ಚಾಲನೆಯೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.

   ದಾನಾಪುರ ಎಂಬಲ್ಲಿ ಗರ್ದನಿಭಾಗ್‌ ಪೊಲೀಸರು ಜೀಪ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಟ್ರಕ್‌ ಒಂದು ಅತವೇಗವಾಗಿ ಬಂದಿದೆ. ಈ ವೇಳೆ  ಟ್ರಕ್‌ ಚಾಲಕನ ನಿಯಂತ್ರಣ ತಪ್ಪಿದ್ದು, ಚಾಲಕ ಟ್ರಕ್‌ನ್ನು ನಿಲ್ಲಿಸಲು ಯತ್ನಿಸಿದ್ದಾನೆ. ಆದ್ರೆ ಟ್ರಕ್‌ ನಿಯಂತ್ರಣ ತಪ್ಪಿ, ಪಕ್ಕದಲ್ಲಿದ್ದ ಪೊಲೀಸ್‌ ಜೀಪ್‌ ಮೇಲೆ ಉರುಳಿಬಿದ್ದಿದೆ. ಈ ವೇಳೆ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ.

ಘಟನೆಯಲ್ಲಿ ಮೂವರು ಪೊಲೀಸ್‌ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಪೊಲೀಸರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಗರ್ದನಿಭಾಗ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Share Post