ತಜ್ಞರ ಜೊತೆ ಸಿಎಂ ಇಂದು ಸಂಜೆ ಸಭೆ: ಲಾಕ್‌ಡೌನ್ ಬಗ್ಗೆ ತೀರ್ಮಾನ
ಬೆಂಗಳೂರು: ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು 2,053 ಹೊಸ ಕೇಸ್ ಬರುವ ಸಾಧ್ಯತೆಯಿದೆ. ಈ ಮಟ್ಟದ ಏರಿಕೆಯ ಬೆನ್ನಲ್ಲೇ ಸಿಎಂ ಬಸವರಾಜು ಬೊಮ್ಮಾಯಿ ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. ಇಂದು ಸಂಜೆ 6.30ಕ್ಕೆ ಸಭೆ ನಡೆಸಲಿದ್ದು ಅಗತ್ಯ ಕ್ರಮಗಳನ್ನ ಕೈಗೊಳ್ಳುವ ಸಾಧ್ಯತೆಯಿದೆ. ಬಹಳ ಬಿಗಿ ರೂಲ್ಸ್ ಅನ್ನು ಮಾಡಲಾಗುವುದು ಎಂದು ಈಗಾಗಲೇ ಸಚಿವರು ಹಾಗೂ ಸಿಎಂ ಸುಳಿವು ನೀಡಿದ್ದಾರೆ, ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ. ಕೇಂದ್ರ ಬೇರೆ ರೆಡ್ ಝೋನ್ ಪಟ್ಟಿಗೆ ಬೆಂಗಳೂರನ್ನು ಸೇರಿಸಿಎ. ಈ ಎಲ್ಲಾ ಬೆಳವಣಿಗೆಗಳ ನಿಟ್ಟಿನಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಬಹಳ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಮಾಡುವ ಅನಿವಾರ್ಯತೆ ಸರ್ಕಾರಕ್ಕಿದೆ.
ಲಾಕ್‌ಡೌನ್, ಸೆಮಿಲಾಕ್‌ಡೌನ್ ಬಗ್ಗೆ ಕೂಡ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತೆ. ಶಾಲಾ-ಕಾಲೇಜು ನಡೆಸುವ ಬಗ್ಗೆಯೂ ಚರ್ಚೆ ಮಾಡುವ ಸಾಧ್ಯತೆಯಿದೆ. ಈಗಾಗಲೇ ಪಕ್ಕದ ರಾಜ್ಯಗಳಲ್ಲಿ ಸೋಂಕು ಹೆಚ್ಚಾದ ಕಾರಣ ಶಾಲೆಗಳನ್ನು ಬಂದ್ ಮಾಡಲಾಗಿದೆ. ಈ ಕ್ರಮವನ್ನು ರಾಜ್ಯದಲ್ಲಿ ಕೂಡ ಜಾರಿ ಮಾಡುತ್ತಾರ ಎಂಬುದನ್ನು ಸಂಜೆ ಸಭೆಯ ಬಳಿಕ ತಿಳಿಯಲಿದೆ.