CrimeDistricts

ವೆಲ್ಡಿಂಗ್‌ ವೇಳೆ ಹಾರಿದ ಕಿಡಿ; 1.5 ಕೋಟಿ ರೂ. ಮೌಲ್ಯದ ಪಟಾಕಿ ಭಸ್ಮ

ಹಾವೇರಿ; ದೀಪಾವಳಿ ಹತ್ತಿರದಕ್ಕೆ ಬಂದಾಗ ತಮಿಳುನಾಡಿನ ಪಟಾಕಿ ತಯಾರಿಕಾ ಫ್ಯಾಕ್ಟರಿಗಳಲ್ಲಿ ಬೆಂಕಿ ದುರಂತಗಳು ನಡೆಯೋದು ಸಾಮಾನ್ಯ. ಆದ್ರೆ, ನಮ್ಮ ರಾಜ್ಯದ ಹಾವೇರಿ ಇಂತಹ ದುರಂತಕ್ಕೆ ಸಾಕ್ಷಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 

ಹಾವೇರಿಯ ಆಲದಕಟ್ಟೆ ಗ್ರಾಮದಲ್ಲಿ ಪಟಾಕಿಗಳನ್ನು ದಾಸ್ತಾನು ಮಾಡಲಾಗಿತ್ತು. ಅಲ್ಲೇ ಪಕ್ಕದಲ್ಲೇ ವೆಲ್ಡಿಂಗ್‌ ಮಾಡುತ್ತಿದ್ದರಿಂದ ಅದರ ಕಿಡಿ ತಗುಲಿ ಪಟಾಕಿ ದಾಸ್ತಾನಿಟ್ಟಿದ್ದ ಮಳಿಗೆ ಸುಟ್ಟು ಕರಕಲಾಗಿದೆ. ಇದರ ಜೊತೆಗೆ ನಾಲ್ಕು ಬೈಕ್‌ಗಳು ಕೂಡಾ ಭಸ್ಮವಾಗಿದೆ. ಸತತ ಮೂರು ಗಂಟೆಗಳ ಕಾರ್ಯಾಚರಣೆ ಬಳಿ ಬೆಂಕಿಯನ್ನು ನಂದಿಸಲಾಗಿದೆ.

ಘಟನೆಯಲ್ಲಿ ಓರ್ವ ಕಾರ್ಮಿಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Share Post