BengaluruCrime

ರಾಮೇಶ್ವರಂ ಕೆಫೆ ಸ್ಫೋಟ ಆರೋಪಿ ಫೋಟೋ ರಿಲೀಸ್‌; ಸುಳಿವು ಕೊಟ್ಟವರಿಗೆ 10 ಲಕ್ಷ ಬಹುಮಾನ

ಬೆಂಗಳೂರು; ಮಾರ್ಚ್‌ 1ರಂದು ನಡೆದಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಯ ಫೋಟೋ ರಿಲೀಸ್‌ ಮಾಡಲಾಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಆಧರಿಸಿ, ಆರೋಪಿಯ ಫೋಟೋ ಬಿಡುಗಡೆ ಮಾಡಲಾಗಿದೆ. ಫೋಟೋದಲ್ಲಿರುವ ಶಂಕಿತ ಉಗ್ರನ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಎನ್‌ಐಎ ಘೋಷಣೆ ಮಾಡಿದೆ.
ಮಾಸ್ಕ್‌ ಧರಿಸಿ, ತಲೆ ಮೇಲೆ ಟೋಪಿ ಇಟ್ಟುಕೊಂಡಿದ್ದ ವ್ಯಕ್ತಿ ಬಗ್ಗೆ ಅನುಮಾನ ಇತ್ತು. ಆದ್ರೆ ಆತನ ಮುಖ ಚಹರೆ ಸಿಸಿಟಿವಿಯಲ್ಲಿ ಪತ್ತೆಯಾಗಿರಲಿಲ್ಲ. ಇದೀಗ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ವೇಳೆ ಮಾಸ್ಕ್‌ ಹಾಕಿಕೊಳ್ಳದ ಆರೋಪಿಯ ದೃಶ್ಯ ಸಿಕ್ಕಿದೆ. ಅದರ ಫೋಟೋವನ್ನು ಈಗ ಎನ್‌ಐಎ ಬಿಡುಗಡೆ ಮಾಡಿದೆ. ಆರೋಪಿಯ ಸುಳ್ಳಿವು ಸಿಕ್ಕರೆ ಕೂಡಲೇ 080-29510900, 8904241100 ಸಂಖ್ಯೆಗೆ ಫೋನ್‌ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಎನ್‌ಐಎ ಮನವಿ ಮಾಡಿದೆ. ಖಚಿತ ಮಾಹಿತಿ ನೀಡಿ, ಆರೋಪಿಯ ಬಂಧನಕ್ಕೆ ನೆರವಾದವರಿಗೆ 10 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ಮೊದಲಿಗೆ ಈ ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿತ್ತು. ತನಿಖಾಧಿಕಾರಿಯನ್ನು ಕೂಡಾ ನೇಮಿಸಲಾಗುತ್ತು. ಆದ್ರೆ, ಎಂಟು ತಂಡಗಳಾಗಿ ಪೊಲೀಸರು ತನಿಖೆ ಶುರು ಮಾಡಿದರೂ ಆರೋಪಿಯ ಸುಳಿವು ಸಿಗಲಿಲ್ಲ. ಹೀಗಾಗಿ ತನಿಖೆಯ ಹೊಣೆಯನ್ನು ಎನ್‌ಐಎ ಅಧಿಕಾರಿಗಳು ಹೊತ್ತುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಈ ಹಿಂದೆ ಕೂಡಾ ಜೈಲಿನಿಂದ ಹೊರಬಂದಿದ್ದ ತಂಡವೊಂದು ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿತ್ತು. ಆದ್ರೆ, ಸ್ಫೋಟಕ್ಕೆ ಸಂಚು ನಡೆಸುತ್ತಿರುವಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣ ಸಂಬಂಧವೂ ಎನ್‌ಐಎ ಅಧಿಕಾರಿಗಳು ತನಿಖೆ ಮುಂದುವರೆಸಿದ್ದು, ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಾರ್ಚ್‌ 1ರ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದರು. ಬಸ್ ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಬಾಂಬ್ ಇದ್ದ ಬ್ಯಾಗ್ ಇಟ್ಟು ಹೋಗಿದ್ದ. ಆತನ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಇನ್ನೂ ಆರೋಪಿ ಸಿಕ್ಕಿಲ್ಲ. ಆರೋಪಿ ಪಕ್ಕದ ರಾಜ್ಯ ತಮಿಳುನಾಡಿಗೆ ಎಸ್ಕೇಪ್ ಆಗಿರುವ ಸಾಧ್ಯತೆ ಇದೆ. ಪ್ರೀ ಪ್ಲ್ಯಾನ್ ಮಾಡಿ ಸ್ಫೋಟ ನಡೆಸಿರುವ ಸಾಧ್ಯತೆ ಇದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಈ‌‌ ಹಿಂದೆ ನಡೆದ ಹಲವು ಸ್ಫೋಟಗಳಿಗೆ ಸಾಮ್ಯತೆ ಇದೆ. ರಾಜ್ಯದಲ್ಲಿ 10 ವರ್ಷಗಳಲ್ಲಿ 3 ಪ್ರಮುಖ ಸ್ಫೋಟಗಳು ಸಂಭವಿಸಿದ್ದು, ಎಲ್ಲದಕ್ಕೂ ಒಂದೇ ರೀತಿಯ ವಸ್ತುಗಳ ಬಳಕೆಯಾಗಿವೆ. ಈ ಮೂರೂ ಪ್ರಕರಣಗಳಲ್ಲಿ ಒಬ್ಬನೇ ಭಾಗಿಯಾಗಿರಬಹುದೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ.

 

Share Post