CinemaCrime

ರಾಖಿ ಸಾವಂತ್‌ ಮದುವೆಯಾಗಿದ್ದ ಮೈಸೂರಿನ ಆದಿಲ್‌ ಖಾನ್‌ ಬಂಧನ

ಮುಂಬೈ; ಬಾಲಿವುಡ್ ನಟಿ ರಾಖಿ ಸಾವಂತ್ ಮದುವೆಯಾಗಿದ್ದ ಮೈಸೂರು ಮೂಲದ ಉದ್ಯಮಿ ಆದಿಲ್‌ ಖಾನ್‌ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ನಟಿ ರಾಖಿ ಸಾವಂತ್‌ಳನ್ನು ಆದಿಲ್‌ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ, ಮದುವೆಯಾದ ಕೆಲವೇ ದಿನಗಳಲ್ಲಿ ರಾಖಿಯಿಂದ ದೂರವಾದ ಆದಿಲ್‌ ಬೇರೊಬ್ಬಳೊಂದಿಗೆ ತಿರುಗಾಡುತ್ತಿದ್ದ ಎನ್ನಲಾಗಿದೆ. ಈ ಕಾರಣಕ್ಕಾಗಿ ರಾಖಿ ಸಾವಂತ್‌ ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಆದಿಲ್‌ನನ್ನು ಬಂಧಿಸಿದ್ದಾರೆ.

ಇತ್ತೀಚೆಗಷ್ಟೇ ರಾಖಿ ಸಾವಂತ್‌ ಅವರು ಆದಿಲ್‌ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ವಿವಾಹೇತರ ಸಂಬಂಧ, ದೌರ್ಜನ್ಯ ಹಾಗೂ ವರದಕ್ಷಿಣೆ ಕಿರುಕುಳ ಆರೋಪವನ್ನು ರಾಖಿ ಸಾವಂತ್‌ ಮಾಡಿದ್ದರು. ಅದೇ ದಿನ ರಾಖಿ ಸಾವಂತ್‌ ಆದಿಲ್‌ ಖಾನ್‌ ಕುರಿತಾದ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಅದ್ರಲ್ಲಿ ಆದಿಲ್‌ ಖಾನ್‌ ಜೊತೆ ರಾಖಿ ಸಾವಂತ್‌ ಊಟ ಮಾಡುತ್ತಿದ್ದಳು. ಆದಿಲ್‌ ನನ್ನ ಕ್ಷಮೆ ಕೇಳಲು ಬಂದಿದ್ದ. ಆದ್ರೆ ನಾನು ಕ್ಷಮಿಸಲಿಲ್ಲ ಎಂದು ರಾಖಿ ಸಾವಂತ್‌ ಹೇಳಿಕೊಂಡಿದ್ದರು. ಅದಾದ ಮೇಲೆ ಆದಿಲ್‌ ಅವರು ರಾಖಿಸಾವಂತ್‌ ಮನೆಗೆ ಬಂದಿದ್ದಾನೆ. ಈ ವೇಳೆ ರಾಖಿ ಸಾವಂತ್‌ ಅವರು ಪೊಲೀಸರನ್ನು ಕರೆಸಿ ಆತನನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.

Share Post