CrimePolitics

ಪೋಕ್ಸೋ ಕೇಸ್‌ನಲ್ಲಿ ಮಾಜಿ ಸಿಎಂ ಬಂಧನಕ್ಕೆ ಸಿದ್ಧತೆ!; ಎಲ್ಲಿ ಹೋದರು ಯಡಿಯೂರಪ್ಪ..?

ಬೆಂಗಳೂರು; ಲೋಕಸಭಾ ಚುನಾವಣೆಗೂ ಮುಂಚೆ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣವೊಂದು ದಾಖಲಾಗಿತ್ತು.. ಮಹಿಳೆಯೊಬ್ಬರು ತನ್ನ ಮಗಳ ಜೊತೆ ಸಹಾಯ ಕೇಳಿಕೊಂಡು ಯಡಿಯೂರಪ್ಪ ನಿವಾಸಕ್ಕೆ ಹೋಗಿದ್ದೆ.. ಈ ವೇಳೆ ನನ್ನ ಮಗಳಿಗೆ ಯಡಿಯೂರಪ್ಪ ಅವರು ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂದು ಆ ಮಹಿಳೆ ಆರೋಪ ಮಾಡಿ ಕೇಸ್‌ ದಾಖಲು ಮಾಡಿದ್ದಳು.. ಈ ಕೇಸ್‌ ನ ತನಿಖೆ ಈಗ ಚುರುಕು ಪಡೆದುಕೊಂಡಿದೆ.. ಪೊಲೀಸರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಬಂಧಿಸಲು ಸಿದ್ಧತೆ ನಡೆಸುತ್ತಿದ್ದಾರೆ.. ಆದ್ರೆ, ಯಡಿಯೂರಪ್ಪ ಅವರು ಬೆಂಗಳೂರಿನಲ್ಲೂ ಇಲ್ಲ, ದೆಹಲಿಯಲ್ಲೂ ಇಲ್ಲ.. ವಿಚಾರಣೆಗೆ ಹಾಜರಾಗಬೇಕಿದ್ದ ಯಡಿಯೂರಪ್ಪ, ಪೊಲೀಸ್‌ ನೋಟಿಸ್‌ಗೆ ಉತ್ತರವೊಂದು ಬರೆದು, ನಾನು ಜೂನ್‌ 17ಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.. ಅನಂತರ ಅವರ ಪತ್ತೆ ಇಲ್ಲ..

ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗದಿದ್ದದರಿಂದ ಪೊಲೀಸರು ನಿನ್ನೆ ಜಾಮೀನು ರಹಿತ ವಾರಂಟ್‌ ಹೊರಡಿಸುವಂತೆ ಕೋರಿ ತ್ವರಿತಗತಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.. ಇಂದು ಈ  ಬಗ್ಗೆ ಬೆಂಗಳೂರಿನ 42ನೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಲಿದೆ.. ಕೋರ್ಟ್‌ ವಾರಂಟ್‌ ಜಾರಿ ಮಾಡಿದರೆ ಪೊಲೀಸರು ಯಡಿಯೂರಪ್ಪ ಅವರನ್ನು ಬಂಧಿಸಲಿದ್ದಾರೆ..

ಯಡಿಯೂರಪ್ಪ ಅವರನ್ನು ಮಾರ್ಚ್‌ 12 ರಂದು ವಿಚಾರಣೆ ನಡೆಸಲಾಗಿತ್ತು.. ಅನಂತರ ಕೇಸ್‌ ವಿಚಾರಣೆ ಪ್ರಗತಿ ಕಂಡಿರಲಿಲ್ಲ.. ಆದ್ರೆ ಈಗ ಇದ್ದಕ್ಕಿದ್ದಂತೆ ಪೊಲೀಸರು ವಿಚಾರಣೆಗೆ ಕೈಗೆತ್ತಿಕೊಂಡಿದ್ದಾರೆ.. ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪಗೆ ನೋಟಿಸ್‌ ನೀಡಿದ್ದರು.. ಆದ್ರೆ ಯಡಿಯೂರಪ್ಪ ಅವರು ನಿನ್ನೆ ಪೊಲೀಸರಿಗೆ ಪತ್ರ ಬರೆದಿದ್ದು, ನೀವು ಕಳುಹಿಸಿದ ನೋಟಿಸ್‌ ನನಗೆ ಇವತ್ತಷ್ಟೇ ತಲುಪಿದೆ.. ಆದ್ರೆ ನನಗೆ ಪೂರ್ವ ನಿರ್ಧರಿತ ಕಾರ್ಯಕ್ರಮಗಳಿದ್ದು, ಅವುಗಳನ್ನು ಭಾಗಿಯಾಗಲು ದೆಹಲಿಗೆ ಹೋಗುತ್ತಿದ್ದೇನೆ.. ಜೂನ್‌ 17ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.. ಆದ್ರೆ ಪೊಲೀಸರು ಅರೆಸ್ಟ್‌ ವಾರಂಟ್‌ ಪಡೆದು ಯಡಿಯೂರಪ್ಪ ಅವರನ್ನು ಬಂಧಿಸಲು ಸಿದ್ಧತೆ ನಡೆಸಿದ್ದಾರೆ..

ಈ ನಡುವೆ ಯಡಿಯೂರಪ್ಪ ಅವರು ನಿನ್ನೆ ಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಕೆ ಮಾಡಿದ್ದಾರೆ.. ಪ್ರಕರಣ ರದ್ದು ಮಾಡಬೇಕು ಹಾಗೂ ವಿಚಾರಣೆಗೆ ತಡೆಯಾಜ್ಞೆ ನೀಡಬೇಕೆಂದು ಯಡಿಯೂರಪ್ಪ ಹೈಕೋರ್ಟ್‌ ಮೊರೆ ಹೋಗಿದ್ದಾರೆ..

ಇನ್ನು ಈ ಬಗ್ಗೆ ತುಮಕೂರಿನಲ್ಲಿ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು,  ಯಡಿಯೂರಪ್ಪಗೆ ನೊಟೀಸ್ ಕೊಟ್ಟಿದ್ದಾರೆ. ಪ್ರೊಸಿಜರ್ ನಲ್ಲಿ ಅವರಿಗೆ ಏನ್ ಮಾಡಬೇಕು ಅದನ್ನ ಪೊಲೀಸರು ಮಾಡ್ತಾರೆ. 15 ತಾರೀಕು ಒಳಗೆ ಚಾರ್ಜ್ ಶೀಟ್ ಫೈಲ್ ಮಾಡ್ಬೇಕು ಅಂತಾ ಇದೆ. ಅಷ್ಟರೊಳಗೆ ಚಾರ್ಜ್ ಶೀಟ್ ಫೈಲ್ ಮಾಡ್ತಾರೆ. ಈಗ ಪ್ರೊಸಿಷರ್ ಫಾಲೋ ಮಾಡ್ಬೇಕಲ್ಲ, ಸ್ಟೇಟ್ಮೆಂಟ್ ತಗೊಬೇಕು. ಅವರನ್ನ ಪ್ರೋಡ್ಯೂಸ್ ಮಾಡಬೇಕು. ಎಲ್ಲಾ ಪ್ರೋಸಿಜರ್, ಅದನ್ನ ಇಲಾಖೆಯವರು ಮಾಡ್ತಾರೆ ಎಂದಿದ್ದಾರೆ..

 

Share Post