ಪಟ್ಟಣಗೆರೆ ಶೆಡ್ನಲ್ಲಿ ಸ್ಥಳಮಹಜರು; ಕೈಕಟ್ಟಿ ನಿಂತ ದರ್ಶನ್, ಪವಿತ್ರಾಗೌಡ ಕಣ್ಣೀರಧಾರೆ!
ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.. ಕೊಲೆ ನಡೆದ ಪಟ್ಟಣಗೆರೆಯ ಶೆಡ್ಗೆ ಎಲ್ಲಾ 13 ಆರೋಪಿಗಳನ್ನು ಕರೆತರಲಾಗಿದೆ.. ಅಲ್ಲಿ ಏನೇನಾಯ್ತು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ.. ಪೊಲೀಸರು ವಿಚಾರಣೆ ನಡೆಸುತ್ತಿದ್ದರೆ, ನಟ ದರ್ಶನ್ ಕೈ ಕಟ್ಟಿಕೊಂಡು ತಲೆ ಬಗ್ಗಿಸಿ ಮೌನವಾಗಿ ನಿಂತಿದ್ದರು.. ಇನ್ನೊಂದೆಡೆ ಪವಿತ್ರಾಗೌಡ ಅವರು ನಿರಂತರವಾಗಿ ಅಳುತ್ತಿರುವ ದೃಶ್ಯ ಕಂಡುಬಂದಿದೆ..
ಕೊಲೆ ಮಾಡಿದ ಸ್ಥಳದಲ್ಲಿ ಹೇಗೆ ಕೊಲೆಯಾಯಿತು ಎಂಬುದಾಗಿ ಪೊಲೀಸರು ಕಲೆ ಹಾಕುತ್ತಿದ್ದಾರೆ.. ಸ್ಥಳ ಮಹಜರಿನ ಭಾಗವಾಗಿ ಕೊಲೆಯ ಹೇಗೆ ನಡೆಯಿತು ಎಂಬುದರ ಮರು ಸೃಷ್ಟಿ ನಡೆಸಲಾಗಿದೆ.. ಯಾರು ಫಸ್ಟ್ ಹೊಡೆದರು..? ಹೇಗೆ ಹೊಡೆದರು..? ಯಾವಾಗ ಕೊಲೆಯಾದ..? ಎಂಬುದರ ದೃಶ್ಯಗಳನ್ನು ಮರುಸೃಷ್ಟಿ ಮಾಡಿ ಅದನ್ನು ಚಿತ್ರೀಕರಿಸಿಕೊಳ್ಳಲಾಗಿದೆ..
ಕೊಲೆಯಾದ ಸ್ಥಳದಲ್ಲಿ ಬಹುತೇಕ ಎಲ್ಲಾ ಆರೋಪಿಗಳೂ ಸಪ್ಪೆಯಾಗಿದ್ದರು.. ಅವರ ಮುಖದಲ್ಲಿ ದುಃಖ ಮಡುಗಟ್ಟಿತ್ತು.. ನಟ ದರ್ಶನ್ ಕೈಕಟ್ಟಿ ಪೊಲೀಸರ ಮುಂದೆ ತಲೆ ತಗ್ಗಿಸಿಕೊಂಡು ನಿಂತಿದ್ದರು.. ಪವಿತ್ರಾ ಗೌಡ ಅವರು ಜೋರಾಗಿ ಅಳುತ್ತಿದ್ದರೂ ಕೂಡಾ ಆ ಕಡೆ ಗಮನವೇ ಕೊಡಲಿಲ್ಲ.. ಇನ್ನೊಂದು ಕಡೆ ಆರೋಪಿ ನಾಗ ಎಂಬಾತ ಕೂಡಾ ನಿರಂತರವಾಗಿ ಅಳುತ್ತಿರುವುದು ಕಂಡುಬಂತು..