CrimeDistricts

ಆಟವಾಡುತ್ತಾ ಸಂಪಿಗೆ ಬಿದ್ದ 2 ವರ್ಷದ ಕಂದಮ್ಮ; ಬೆಳಗಾವಿಯಲ್ಲಿ ನಡೆದದ್ದು ದಾರುಣ

ಬೆಳಗಾವಿ; ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಮಗುವೊಂದು ಸಂಪಿಗೆ ಇದ್ದು ಸಾವನ್ನಪ್ಪಿತ್ತು.. ಪೋಷಕರು ಮಗುವನ್ನು ಮನೆಯ ಬಳಿ ಬಿಟ್ಟು ಕೆಲಸಕ್ಕೆ ಹೋಗಿದ್ದರಿಂದ ಮಗುವಿಗೆ ಗೊತ್ತಿಲ್ಲದೆ ಅದು ಸಂಪಿಗೆ ಬಿದ್ದಿತ್ತು.. ಇಂತಹ ಹಲವಾರು ಘಟನೆಗಳು ನಡೆಯುತ್ತಿದ್ದರೂ ಪೋಷಕರು ಎಚ್ಚೆತ್ತುಕೊಳ್ಳುತ್ತಿಲ್ಲ.. ಇದೀಗ ಬೆಳಗಾವಿಯ ಸರದಿ..  ಬೆಳಗಾವಿಯ ಕಂಗ್ರಾಳ ಗಲ್ಲಿಯಲ್ಲಿ ಎರಡು ವರ್ಷದ ಕಂದಮ್ಮ ಆಟವಾಡುತ್ತಾ ಸಂಪಿಗೆ ಬಿದ್ದು ಸಾವನ್ನಪ್ಪಿದೆ..

ಮನೆಯಲ್ಲಿ ನೀರು ತುಂಬಿಸೋದಕ್ಕೆ ಸಂಪ್‌ ಮಾಡಲಾಗಿತ್ತು.. ಅದು ತೆರೆಲಾಗಿದ್ದು, ಮಗು ಆಟವಾಡುತ್ತಾ ಹೋಗಿ ಅದರಲ್ಲಿ ಬಿದ್ದು ಸಾವನ್ನಪ್ಪಿದೆ.. ಎರಡು ವರ್ಷದ ಸಾಯಿಶಾ ಸಂದೀಪ್‌ ಎಂಬ ಹೆಣ್ಣು ಮಗುವೇ ಸಾವನ್ನಪ್ಪಿದ ದುರ್ದೈವಿ.. ಪೋಷಕರ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ನಡೆದಿದೆ..

ಮನೆಯ ಬಳಿ ಮಗು ಆಟವಾಡುತ್ತಿತ್ತು.. ಆದ್ರೆ ಅದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ.. ಇದರಿಂದ ಗಾಬರಿಯಾದ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ.. ಎಲ್ಲೂ ಕೂಡಾ ಮಗು ಪತ್ತೆಯಾಗಿಲ್ಲ.. ಕೊನೆಗೆ ಸಂಪ್‌ನಲ್ಲಿ ನೋಡಿದಾಗ ಮಗು ಸಾವನ್ನಪ್ಪಿರುವುದು ಗೊತ್ತಾಗಿದೆ.. ಕೂಡಲೇ ದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು.. ಆದ್ರೆ ಮಗು ಆಗಲೇ ಸಾವನ್ನಪ್ಪಿದೆ ಅಂತ ವೈದ್ಯರು ಖಾತ್ರಿ ಮಾಡಿದ್ದಾರೆ.. ಇದರಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ..

 

Share Post