CrimeNational

ಸಂಸತ್‌ ಕಲರ್‌ ಸ್ಮೋಕ್‌ ಪ್ರಕರಣ; ಆರೋಪಿ ಸಾಗರ್‌ ಡೈರಿಯಲ್ಲಿವೆ 30 ಹೆಸರುಗಳು, ನಂಬರ್‌ಗಳು!

ನವದೆಹಲಿ; ಬುಧವಾರ ಲೋಕಸಭಾ ಕಲಾಪದ ವೇಳೆ ಗ್ಯಾಲರಿಯಲ್ಲಿ ಕುಳಿತಿದ್ದ ಮನೋರಂಜನ್‌ ಹಾಗೂ ಸಾಗರ್‌ ಶರ್ಮಾ ಎಂಬ ಯುವಕರು ಸಡನ್‌ ಆಗಿ ಕಲಾಪ ಪ್ರದೇಶಕ್ಕೆ ನುಗ್ಗಿದ್ದರು. ಸಾಲದೆಂಬಂತೆ ಅಲ್ಲಿ ಕಲರ್‌ ಸ್ಮೋಕ್‌ ಸಿಡಿಸಿ ಆತಂಕಕ್ಕೆ ಕಾರಣರಾಗಿದ್ದವು. ಇದೀಗ ಸಾಗರ್‌ ಶರ್ಮಾನ ಮನೆಯಲ್ಲಿ ಜಾಲಾಡಿದಾಗ, ಆತನ ಡೈರಿ ಸಿಕ್ಕಿದೆ. ಆ ಡೈರಿಯಲ್ಲಿ 30 ಮಂದಿಗೆ ಹೆಸರುಗಳು ಹಾಗೂ ಫೋನ್‌ ನಂಬರ್‌ ಪತ್ತೆಯಾಗಿದೆ. ಈ ಲಿಸ್ಟ್‌ ಜಾಡು ಹಿಡಿದು ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಆದ್ರೆ, ಡೈರಿಯಲ್ಲಿ ಬರೆಯಲಾದ ಫೋನ್‌ ನಂಬರ್‌ಗಳಲ್ಲಿ ಹೆಚ್ಚಿನ ನಂಬರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಪೊಲೀಸರಿಗೆ ತನಿಖೆ ಕೊಂಚ ತಲೆನೋವಾಗಿದೆ. ಇನ್ನೊಂದೆಡೆ ಸಾಗರ್‌ ಬರೆದಿರುವ ಡೈರಿಯಲ್ಲಿ ನಾನು ಮಧ್ಯಮ ವರ್ಗದ ವ್ಯಕ್ತಿಯಾಗಿದ್ದು, ದೇಶಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ. ನನ್ನ ಜೊತೆ ದೇಶಕ್ಕಾಗಿ ದುಡಿಯುವ ಪ್ರಾಮಾಣಿಕ ವ್ಯಕ್ತಿಗಳು ನನಗೆ ಬೇಕು ಎಂದು ಬರೆದುಕೊಂಡಿದ್ದಾನೆ. ಅಷ್ಟೇ ಅಲ್ಲ, ಡೈರಿಯಲ್ಲಿ ಅನೇಕ ಟಿಪ್ಪಣಿಗಳು ಕೂಡಾ ಸಿಕ್ಕಿವೆ.

ದೇಶಭಕ್ತಿಯ ಕವನಗಳು, ಹಾಡುಗಳು, ಕ್ರಾಂತಿಕಾರಿ ಚಿಂತನೆಗಳನ್ನು ಕೂಡಾ ಡೈರಿಯಲ್ಲಿ ಬರೆಯಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಸಾಗರ್‌ ಉತ್ತರ ಪ್ರದೇಶದವನಾಗಿದ್ದು, ಆಟೋ ಡ್ರೈವರ್‌ ಆಗಿ ಕೆಲಸ ಮಾಡುತ್ತಾನೆ. ಈತ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತೇನೆಂದು ಹೇಳಿ, 2018ರಲ್ಲಿ ಕರ್ನಾಟಕಕ್ಕೆ ಬಂದಿದ್ದ. 2020ರವರೆಗೂ ಇಲ್ಲಿಯೇ ಇದ್ದ ಆತ, ಕೊರೊನಾ ಬಂದ ಮೇಲೆ ಸ್ವಗ್ರಾಮಕ್ಕೆ ಹೋಗಿದ್ದ ಎಂದು ತಿಳಿದುಬಂದಿದೆ.

 

Share Post