ಶಾಲಾ ಸಹಪಾಠಿಗಳಿಂದ ಅಶ್ಲೀಲ ಮೆಸೇಜ್; ಮನನೊಂದು ಗೃಹಿಣಿ ಆತ್ಮಹತ್ಯೆ!
ಬೆಂಗಳೂರು; ಶಾಲೆಯಲ್ಲಿ ಓದುತ್ತಿದ್ದಾಗಿನ ಸಹಪಾಠಿಗಳು ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದರಿಂದ ಬೇಸತ್ತ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಿಡೇದಹಳ್ಳಿಯಲ್ಲಿ ಈ ಘಟನೆ ನಡೆದಿದೆ.. 31 ವರ್ಷದ ಮಮತಾ ಎಂಬಾಕೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ..
ಇದನ್ನೂ ಓದಿ; ಬಾಲ್ಯ ಸ್ನೇಹಿತನ ಜೊತೆ ಪತ್ನಿಗೆ ಮದುವೆ ಮಾಡಿಸಿದ ಪತಿ!
ಮಮತಾಗೆ ತನ್ನ ಶಾಲಾ ದಿನಗಳಲ್ಲಿ ಸಹಪಾಠಿಗಳಾಗಿದ್ದ ವಡ್ಡರಹಳ್ಳಿಯ ಅಶೋಕ್ ಹಾಗೂ ಜೆಪಿ ನಗರದ ಗಣೇಶ್ ಅಶ್ಲೀಲವಾಗಿ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದರು.. ಜೊತೆಗೆ ನೈಟ್‌ಔಟ್‌ಗೆ ಬಾ, ನಮ್ಮ ಜೊತೆ ಸಹಕರಿಸು ಎಂದೆಲ್ಲಾ ಮೆಸೇಜ್‌ಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ.. ಇದರಿಂದ ಮನನೊಂದು ಮಮತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ..
ಇದನ್ನೂ ಓದಿ; ಕಿಡ್ನಿ ಸಮಸ್ಯೆ ಇದ್ದರೆ ಮೊದಲೇ ತಿಳಿಯವುದು ಹೇಗೆ..?
ಇತ್ತೀಚೆಗೆ ಮೆಸೇಜ್ ಮಾಡಿದ್ದ ಇಬ್ಬರು ಆರೋಪಿಗಳು ನಿನ್ನನ್ನ ನಾವು ಬಿಡೋದಿಲ್ಲ.. ನಿನ್ನ ಸಂಸಾರವನ್ನು ಹಾಳು ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ.. ಈ ಕಾರಣದಿಂದ ಮಮತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಅಂದಹಾಗೆ ಮಮತಾ ಮೂರು ವರ್ಷದ ಹಿಂದೆ ಲೋಕೇಶ್ ಎಂಬುವವರನ್ನು ಪ್ರೀತಿಸಿ, ಮನೆಯವರ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದರು.. ದಾಂಪತ್ಯ ಚೆನ್ನಾಗಿಯೇ ನಡೆಯುತ್ತಿತ್ತು.. ಆದ್ರೆ ಬಾಲ್ಯ ಸ್ನೇಹಿತರ ಕಾಟದಿಂದ ಮಮತ ಆತ್ಮಹತ್ಯೆಗೆ ಶರಣಾಗಿದ್ದಾಳೆ.. ಗಂಡ ಕರೆ ಮಾಡಿದಾಗ ಮಮತಾ ಸ್ವೀಕಾರ ಮಾಡಿಲ್ಲ.. ಇದರಿಂದ ಅನುಮಾನಗೊಂಡು ಮನೆ ಬಳಿ ಬಂದ ಗಂಡ ಲೋಕೇಶ್, ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.. ಈ ಬಗ್ಗೆ ಬೆಂಗಳೂರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಇದನ್ನೂ ಓದಿ; ಮೈಸೂರಿಗೆ ಬಿಜೆಪಿ ಪಾದಯಾತ್ರೆ; ಷರತ್ತಿಗೆ ಒಪ್ಪಿದರೆ ಮಾತ್ರ ಜೆಡಿಎಸ್ ಭಾಗಿ!