Politics

ಮೈಸೂರಿಗೆ ಬಿಜೆಪಿ ಪಾದಯಾತ್ರೆ; ಷರತ್ತಿಗೆ ಒಪ್ಪಿದರೆ ಮಾತ್ರ ಜೆಡಿಎಸ್‌ ಭಾಗಿ!

ಬೆಂಗಳೂರು; ಮುಡಾ ಹಾಗೂ ವಾಲ್ಮೀಕಿ ನಿಗಮದಲ್ಲಿನ ಹಗರಣ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ತೀರ್ಮಾನ ಮಾಡಿದ್ದಾರೆ.. ಜೆಡಿಎಸ್‌ ಬೆಂಬಲದೊಂದಿಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದು, ಕೋರ್‌ ಕಮಿಟಿ ಸಭೆ ನಡೆಸಲಾಗಿತ್ತು.. ಇದಕ್ಕೆ ಮಾಜಿ ಶಾಸಕ ಪ್ರೀತಂ ಗೌಡರನ್ನು ಕರೆಸಿದ್ದರಿಂದ ಕುಮಾರಸ್ವಾಮಿ ಕೋಪಗೊಂಡಿದ್ದರು.. ಪಾದಯಾತ್ರೆಯಲ್ಲಿ ಜೆಡಿಎಸ್‌ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದರು..

ಇದನ್ನೂ ಓದಿ; ರಾಜ್ಯಪಾಲರ ನೋಟಿಸ್‌ ವಾಪಸ್‌ ಪಡೆಯುವಂತೆ ಒತ್ತಾಯಿಸಿ ನಿರ್ಣಯ!

ಇದೀಗ ಕುಮಾರಸ್ವಾಮಿ ಜೊತೆ ಜೆಪಿ ನಡ್ಡಾ ಹಾಗೂ ಪ್ರಹ್ಲಾದ್‌ ಜೋಷಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.. ಕುಮಾರಸ್ವಾಮಿ ಅವರ ಮನವೊಲಿಸಿದ್ದು, ಪಾದಯಾತ್ರೆಯಲ್ಲಿ ಜೆಡಿಎಸ್‌ ಕೂಡಾ ಪಾಲ್ಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.. ಆದ್ರೆ ಕುಮಾರಸ್ವಾಮಿಯವರು ಇದಕ್ಕೆ ಒಂದು ಷರತ್ತು ವಿಧಿಸಿದ್ದಾರೆ ಎಂದು ತಿಳಿದುಬಂದಿದೆ.. ಪ್ರೀತಂ ಗೌಡ ಪೆನ್‌ಡ್ರೈವ್‌ ರಿಲೀಸ್‌ ಮಾಡಿ ನಮ್ಮ ಕುಟುಂಬದ ಮಾನ ಹರಾಜು ಹಾಕಿದ್ದಾರೆ.. ಹೀಗಾಗಿ ಪ್ರೀತಂ ಗೌಡ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಾರದು.. ಹಾಗಿದ್ದರೆ ಮಾತ್ರ ಜೆಡಿಎಸ್‌ ಬೆಂಬಲ ನೀಡುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಕುಳಿತಲ್ಲೇ ಪ್ರಾಣ ಬಿಟ್ಟ ಗಾರೆ ಕೆಲಸಗಾರ; ಮಾರನೆ ದಿನದವರೆಗೂ ಗೊತ್ತಾಗಲೇ ಇಲ್ಲ!

Share Post