CrimeInternational

ಇದ್ದಕ್ಕಿದ್ದಂತೆ ಕುಸಿಯಿತು ಬೃಹತ್‌ ಪರ್ವತ; 14 ಮಂದಿ ದುರ್ಮರಣ

ಬೀಜಿಂಗ್;‌ ಚೀನಾದಲ್ಲಿ ಭೀಕರ ದುರಂತ ಸಂಭವಿಸಿದೆ. ಪರ್ವತವೊಂದು ಕುಸಿದುಬಿದ್ದಿದ್ದು, ಹದಿನಾಲ್ಕು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೂ ಐವರು ನಾಪತ್ತೆಯಾಗಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಈ ದುರಂತ ಸಂಭವಿಸಿದೆ.  ಇಲ್ಲಿನ ಜಿಂಕೌಹೆ ಜಿಲ್ಲೆಯ ಯೊಂಗ್‌ಶೆಂಗ್ ಟೌನ್‌ಶಿಪ್‌ನಲ್ಲಿರುವ ಅರಣ್ಯ ಫಾರ್ಮ್‌ನಲ್ಲಿ ಇಂದು ಬೆಳಗ್ಗೆ 6 ಗಂಟೆಗೆ ಪರ್ವತ ಕುಸಿದಿದೆ.

180 ಕ್ಕೂ ಹೆಚ್ಚು ಸಿಬ್ಬಂದಿ ಇರುವ ರಕ್ಷಣಾ ತಂಡ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

 

Share Post