ಕುರಿ ಬದಲು ಮನುಷ್ಯನ ತಲೆ ಕತ್ತರಿಸಿದ ಕುಡುಕ
ಹೈದರಾಬಾದ್: ಹಬ್ಬ-ಹರಿದಿನಗಳಲ್ಲಿ ಹರಕೆ ಸಂಪ್ರದಾಯಗಳಂತಹ ಪದ್ದತಿ ಇನನೂ ಇದೆ. ಅದರಲ್ಲೂ ಪ್ರಾಣಿ ಬಲಿ ನಿಷೇಧಿಸಿದ್ರೂ ಸಹ ಆ ಮೂಢನಂಬಿಕೆಯನ್ನು ಜನ ಇನ್ನೂ ಪಾಲನೆ ಮಾಡ್ತಿದಾರೆ. ಅದರಲ್ಲು ಶಕ್ತಿ ದೇವತೆಗಳಿಗೆ ಕುರಿ, ಕೋಳಿ ಬಲಿಕೊಡುವುದು ಸರ್ವೆ ಸಾಮಾನ್ಯ. ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ಹಬ್ಬಕ್ಕೆಂದು ಕುರಿ ತಲೆ ಕಡಿಯುವ ಬದಲು ಕುಡಿದ ಅಮಲಿನಲ್ಲಿ ಮನುಷ್ಯನ ತಲೆ ಕತ್ತರಿಸಿದ ಘಟನೆ ಚಿತ್ತೂರು ಜಿಲ್ಲೆಯ ವಲಸಪಲ್ಲಿಯಲ್ಲಿ ನಡೆದಿದೆ.
ಆ ಹಳ್ಳಿಯಲ್ಲಿ ಸಂಕ್ರಾಂತಿ ಹಬಬ್ ಅಚರಣೆ ವೇಳೆ ಕುರಿ ಬಲಿಕೊಡುವ ಪದ್ದತಿ ಇದೆ. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡು ಎಲ್ಲಮ್ಮ ದೇವಾಲಯದ ಬಳಿ ಕರೆತಂದಿದ್ದಾರೆ. ತಲೆ ಕಡಿಯಲು ಸಜ್ಜಾಗಿದ್ದ ಚಲಪತಿ ಕಂಠಪೂರ್ತಿ ಕುಡಿದು ನಶೆಯಲ್ಲಿ ತೇಲಾಡುತ್ತಿದ್ದಾನೆ. ಈ ವೇಳೆ ಕುರಿ ತಲೆ ಕತ್ತರಿಸುವ ಬದಲು. ಕುರಿಯನ್ನು ಹಿಡಿದುಕೊಂಡಿದ್ದ ಸುರೇಶ್ ಎಂಬಾತನ ತಲೆಗೆ ಮಚ್ಚು ಬೀಸಿದ್ದಾನೆ. ರಕ್ತಸ್ರಾವದಿಂದ ಸುರೇಶ್ ಕೆಳಗೆ ಬಿದ್ದು ನರಳಾಡಿದ್ದಾನೆ. ಕೂಡಲೇ ಆತನನ್ನು ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಧಿಕ ರಕ್ತಸ್ರಾವವಾದ ಕಾರಣ ಸುರೇಸ್ ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮತ್ತಿನ ಅಮಲಿನಲ್ಲಿದ್ದ ಚಲಪತಿ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.