ರಹಸ್ಯ ಕೋಣೆಯಲ್ಲಿದ್ದ 17 ಬಾರ್ ಗರ್ಲ್ಸ್ ರಕ್ಷಣೆ
ಮುಂಬೈ: ಇಲ್ಲಿನ ಅಂಧೇರಿ ಪ್ರದೇಶ ದೀಪಾ ಬಾರ್ನಲ್ಲಿ ರಹಸ್ಯವಾಗಿ ಅಡಗಿಕೊಂಡಿದ್ದ ೧೭೭ ಬಾರ್ ಗರ್ಲ್ಸ್ನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಡ್ಯಾನ್ಸ್ ಬಾರ್ ಮೇಲೆ ದಾಳಿ ಮಾಡಿದಾಗ ಪೊಲೀಸರಿಗೆ ಏನೂ ಪತ್ತೆಯಾಗಿರಲಿಲ್ಲ. ಆದರೆ, ಕೊನೆಗೆ ರಹಸ್ಯ ಬಾಗಿಲೊಂದು ಪತ್ತೆಯಾಗಿದ್ದು, ಅದನ್ನು ತೆಗೆದು ಒಳಹೋದಾಗ ೧೭ ಮಂದಿ ಡ್ಯಾನ್ಸ್ ಗರ್ಲ್ಸ್ ಇದ್ದದ್ದು ಪತ್ತೆಯಾಗಿದೆ.
ಕೋವಿಡ್ ನಿಮಯ ಉಲ್ಲಂಘಿಸಿ ಮುಂಬೈನ ಅಂಧೇರಿ ಪ್ರದೇಶದಲ್ಲಿರುವ ದೀಪಾ ಬಾರ್ ಡ್ಯಾನ್ಸ್ ಕ್ಲಬ್ ನಡೆಸಲಾಗುತ್ತಿತ್ತು. ನಿಯಮಗಳನ್ನು ಗಾಳಿಗೆ ತೂರಿ ಬಾರ್ ಡ್ಯಾನ್ಸರ್ಗಳಿಂದ ಬಾರ್ಗಳಲ್ಲಿ ಬಹಿರಂಗವಾಗಿ ನೃತ್ಯ ಮಾಡಿಸಲಾಗುತ್ತಿತ್ತು. ಈ ಬಗ್ಗೆ ಸರ್ಕಾರೇತರ ಸಂಸ್ಥೆಯೊಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.