BengaluruCrime

ನಿರ್ಮಾಣ ಹಂತದ ಶಾಲಾ ಕಟ್ಟಡ ಕುಸಿತ; ಇಬ್ಬರ ದುರ್ಮರಣ

ಬೆಂಗಳೂರು; ಆನೇಕಲ್ ಬಳಿ‌‌ ನಿರ್ಮಾಣ ಹಂತದ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ಆನೇಕಲ್ ಬಳಿಯ ಬ್ಯಾಡರಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ.

  ಗಾಯಾಳುಗಳನ್ನು ಸೇಂಟ್ ಜಾನ್ಸ್ ಹಾಗೂ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಶಾಲಾ ಕಟ್ಟಡದ ಕಾಮಗಾರಿ ನಡೆಯುತ್ತಿತ್ತು. ೧೦೦ಕ್ಕೂ ಹೆಚ್ಚು ಕಲ್ಕತ್ತಾ ಮೂಲದ ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಮಿನರ್ ಬಿಸ್ವಾಸ್ ಹಾಗೂ ಶಾಹಿದ್ ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.

   ಎರಡನೇ ಮಹಡಿಯ ಸೆಂಟ್ರಿಂಗ್ ಹಾಕಿ ಕಾಂಕ್ರೀಟ್ ಮಾಡುವ ವೇಳೆ ಈ ದುರಂತ ನಡೆದಿದೆ. ಭಾರ ಹೆಚ್ಚಾಗಿ ಸಿಮೆಂಟ್ ಹಾಗೂ ಕಬ್ಬಿಣ ಕುಸಿದೆ. ಈ ವೇಳೆ ಕಟ್ಟಡದ ಮೇಲೆ 16 ಕಾರ್ಮಿಕರಿದ್ದರು ಎಂದು ತಿಳಿದುಬಂದಿದೆ.

 

Share Post