BIG BREAKING; ಸಿದ್ದರಾಮಯ್ಯಗೆ ಬಿಗ್ ಶಾಕ್!; ತನಿಖೆಗೆ ಕೋರ್ಟ್ ಅಸ್ತು!
ಬೆಂಗಳೂರು; ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ವಿಚಾರಣೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.. ಇದರಿಂದಾಗಿ ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್ ಆಗಿದೆ.. ಸಿದ್ದರಾಮಯ್ಯ ವಿಚಾರಣೆ ಎದುರಿಸಬೇಕಾದ ಅನಿವಾರ್ಯತೆ ಇದೆ.. ಈ ಹಿನ್ನೆಲೆಯಲ್ಲಿ ಅವರ ಸಿಎಂ ಸ್ಥಾನಕ್ಕೂ ಕಂಟಕ ಎದುರಾಗುವ ಸಾಧ್ಯತೆ ಇದೆ..
ಮೈಸೂರು ಲೋಕಾಯುಕ್ತರು ಪ್ರಕರಣದ ತನಿಖೆ ನಡೆಸಬೇಕು. ಮೂರು ತಿಂಗಳಲ್ಲಿ ತನಿಖೆ ಮಾಡಿ, ತನಿಖೆ ವರದಿಯನ್ನು ನೀಡಬೇಕು ಎಂದು ಜನಪ್ರತಿನಿಧಿಗಳ ನ್ಯಾಯಾಲಯ ತಿಳಿಸಿದೆ.. ಡಿಸೆಂಬರ್ 24ರೊಳಗೆ ವರದಿ ಕೊಡುವಂತೆ ಸೂಚನೆ ನೀಡಲಾಗಿದೆ. ಸಿಆರ್‌ಪಿಸಿ ಯಡಿ ತನಿಖೆ ಮಾಡುವಂತೆ ಮೈಸೂರು ಲೋಕಾಯುಕ್ತ ಎಸ್‌ಪಿಗೆ ಆದೇಶ ನೀಡಲಾಗಿದೆ.
ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಈ ಆದೇಶ ನೀಡಿದ್ದಾರೆ. ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರ ಹೆಸರಿನಲ್ಲಿದ್ದ ಜಮೀನು ಸ್ವಾಧೀನ, ಪರಿಹಾರ ನಿಗದಿ, ಅನಂತರ ಡಿನೋಟಿಫಿಕೇಷನ್ ಸೇರಿದ್ದಂತೆ ಹಲವು ಅಂಶಗಳನ್ನು ಉಲ್ಲೇಖ ಮಾಡಿ ಈ ಆದೇಶ ನೀಡಲಾಗಿದೆ.. ಸಿಎಂ ಪತ್ನಿಗೆ ಜಮೀನು ದಾನ ಮಾಡಲಾಗಿದೆ.. ಇದಕ್ಕೆ ಬದಲಿ ನಿವೇಶನ ಪಡೆದಿರುವುದು ಕಾನೂನು ಬಾಹಿರ ಎಂದು ಉಲ್ಲೇಖ ಮಾಡಲಾಗಿದೆ.
ಮೂಲ ಮಾಲೀಕರಲ್ಲದಿದ್ದರೂ ದೇವರಾಜುನಿಂದ ಜಮೀನು ಖರೀದಿ ಹಾಗೂ ದೇವರಾಜು ಹೆಸರಲ್ಲಿ ಡಿನೋಟಿಫಿಕೇಷನ್ ಮಾಡಿಸಲಾಗಿದೆ.. ರಾಜ್ಯಪಾಲರು ಇದರ ವಿಚಾರಣೆಗೆ ಅನುಮತಿ ಕೊಟ್ಟಿದ್ದಾರೆ.. ಹೈಕೋರ್ಟ್ ಕೂಡಾ ಈ ಬಗ್ಗೆ ಆದೇಶ ಕೊಟ್ಟಿದೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.
ಮುಡಾದಲ್ಲಿ ಸಿದ್ದರಾಮಯ್ಯ ಪತ್ನಿಗೆ ಅಕ್ರಮವಾಗಿ 14 ಬದಲಿ ನಿವೇಶನ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಸಿದ್ದರಾಮಯ್ಯ ಪಾತ್ರ ಇದೆ ಎಂದು ಸ್ನೇಹಮಯಿ ಕೃಷ್ಣ, ಟಿ.ಜೆ.ಅಬ್ರಹಾಂ ಹಾಗೂ ಪ್ರದೀಪ್ ಎಂಬುವವರು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಖಾಸಗಿ ದೂರುಗಳನ್ನು ಸಲ್ಲಿಸಿದ್ದರು.. ಇದರ ಜೊತೆ ಇವರ ಮನವಿ ಮೇರೆಗೆ ರಾಜ್ಯಪಾಲರು ಕೂಡಾ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದರು.. ಇದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೊರೆ ಹೋಗಿದ್ದರು.. ಆದ್ರೆ ಹೈಕೋರ್ಟ್, ಸಿದ್ದರಾಮಯ್ಯ ಮನವಿಯನ್ನು ತಳ್ಳಿ ಹಾಕಿದೆ.. ಹೀಗಾಗಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ.